ಉತ್ತರಕನ್ನಡ : ಉತ್ತರಕನ್ನಡದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಜಿಲ್ಲಾಸ್ಪತ್ರೆ ಹೊಸ ಕಟ್ಟಡದಲ್ಲಿ ಮಹಡಿ ಶೀಟ್ ಗಳು ಕುಸಿತವಾಗಿವೆ. ಕಳಪೆ ಕಾಮಗಾರಿಯಿಂದ ಕಟ್ಟಡ ಮೇಲ್ಭಾಗದ ಸಿಮೆಂಟ್ ಶೀಟ್ ಗಳು ಕುಸಿದಿವೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ಘಟನೆ ಸಂಭವಿಸಿದೆ.
ಸುಮಾರು 198.27 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣವಾಗಿದ್ದು, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿ ಈ ಒಂದು ಜಿಲ್ಲಾಸ್ಪತ್ರೆ ಬರುತ್ತದೆ. ಸುಮಾರು 4 ಅಂತಸ್ತಿನ ಎರಡನೇ ಮಹಡಿಯಲ್ಲಿದ್ದ ಶೀಟ್ ಗಳು ಕುಸಿತವಾಗಿವೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 1979ರಲ್ಲಿ ನಿರ್ಮಾಣವಾಗಿದೆ. ಜಿಲ್ಲಾಸ್ಪತ್ರೆ ಕಟ್ಟಡ ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಉದ್ಘಾಟನೆಗೂ ಮೊದಲೇ ಮೊದಲ ಮಹಡಿಯಿಂದ ಹೆರಿಗೆ ವಾರ್ಡ್ ಮತ್ತು NICU ನಲ್ಲಿರುವ ರೋಗಿಗಳನ್ನು ಶಿಫ್ಟ್ ಮಾಡಲಾಗಿತ್ತು. ಹಾಗಾಗಿ ಭಾರಿ ಅನಾಹುತ ಒಂದು ತಪ್ಪಿದೆ.