ಬಾಗಲಕೋಟೆ: ಹಿಂದೂಗಳು ಆತ್ಮ ರಕ್ಷಣೆಗಾಗಿ ತಮ್ಮ ಶಸ್ತ್ರ, ಆಯುಧ ಇಟ್ಕೊಳಿ ಎಂದು ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ವಿವಾದದ ಹೇಳಿಕೆ ನೀಡಿದ್ದಾರೆ. ಎಲ್ಲಾ ಕಡೆಯೂ ಪೊಲೀಸರು ಬರುವುದಕ್ಕೆ ಆಗುವುದಿಲ್ಲ. ಆಯುಧ ಇದ್ದರೆ ಅನ್ಯಾಯದ ವಿರುದ್ಧ ಎತ್ತಲಿಕ್ಕೆ ಬರುತ್ತದೆ ನಮ್ಮನೆ ರಕ್ಷಣೆ ಮಾಡಿಕೊಳ್ಳದಿದ್ದರೆ ದೇಶದ ರಕ್ಷಣೆ ಹೇಗೆ ಆಗುತ್ತದೆ? ಎಂದು ಹೇಳಿಕೆ ನೀಡಿದ್ದಾರೆ.
ಆಯುಧ ಪೂಜೆ ದಿನ ಎಲ್ಲರೂ ಪೂಜೆ ಮಾಡಬೇಕು. ಆಯುಧ ಪೂಜೆಯ ದಿನ ಕಾರು ಜೀಪು ಪೂಜೆ ಮಾಡುವುದಲ್ಲ. ಆಯುಧ ಪೂಜೆಯಲ್ಲಿ ಶಾಸ್ತ್ರ ಮತ್ತು ಶಸ್ತ್ರ ಎರಡು ಬೇಕು. ಆಯುಧ ಮನೆಯಲ್ಲಿ ಇತ್ತು ಅಂದರೆ ಅನ್ಯಾಯದ ವಿರುದ್ಧ ಎತ್ತಲಿಕ್ಕೂ ಶಸ್ತ್ರ ಬಳಗಾಗುತ್ತದೆ. ಹಾಗಾಗಿ ಆಯುಧ ಬೇಕೆ ಬೇಕು. ನಮ್ಮನ್ನ ನಾವು ಸಂರಕ್ಷಣೆ ಮಾಡಿಕೊಳ್ಳಬೇಕು. ಯಾರೋ ಬಂದು ನಮ್ಮನ್ನು ರಕ್ಷಣೆ ಮಾಡುತ್ತಾರೆ ಎನ್ನುವುದನ್ನು ತಲೆಯಿಂದ ತೆಗೆದುಹಾಕಿ. ಎಲ್ಲಾ ಕಡೆಗೂ ಪೊಲೀಸರು ಬರುವುದಕ್ಕೂ ಸಾಧ್ಯವಿಲ್ಲ ಇರಲು ಸಾಧ್ಯವಿಲ್ಲ.
ನಾವು ಅನ್ಯಾಯ ಮಾಡುವುದಿಲ್ಲ. ನನ್ನ ಮೈ ಮೇಲೆ ಬಂದಾಗ ನಾನು ಸ್ವಯಂ ರಕ್ಷಣೆಗಾಗಿ ಮಾಡಬೇಕಲ್ವಾ ನಮ್ಮ ರಕ್ಷಣೆ ಮಾಡಿಕೊಳ್ಳದಿದ್ದರೆ ಸಮಾಜ ಮತ್ತು ರಾಷ್ಟ್ರ ರಕ್ಷಣೆ ಹೇಗೆ ಮಾಡುತ್ತೇವೆ? ನಾವು ಹೇಳುತ್ತೇವೆ ಅನ್ಯಾಯದ ವಿರುದ್ಧ ಮತ್ತು ದೇಶದ ಸಲುವಾಗಿ ಹೋರಾಟ ಮಾಡಬೇಕು ಅಂತ. ಹಾಗಾದರೆ ಮೊದಲು ನಮ್ಮ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು. ಇವತ್ತು ಜನ ಆಯುಧ ಪೂಜೆ ಏನು ಎಂಬುದರ ಕುರಿತು ಮರೆತುಬಿಟ್ಟಿದ್ದಾರೆ. ಹಾಗಾಗಿ ಹಿಂದಿನಿಂದಲೂ ಆಯುಧ ಪೂಜೆ ಎನ್ನುವುದು ನಮ್ಮ ಸಂಪ್ರದಾಯದಲ್ಲಿ ನಡೆದುಕೊಂಡು ಬಂದಿದೆ ಎಂದರು.