ಬೆಂಗಳೂರು : ನಟ ದರ್ಶನ್ ಕೊಲೆ ಆರೋಪದ ಮೇಲೆ ಸದ್ಯ ಬೆಂಗಳೂರಿನಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಜೈಲಿಲ್ಲಿ ಇದ್ದಾರೆ. ಕೋರ್ಟ್‌ನಲ್ಲಿ ತಮಗೆ ಬೇಕಾಗಿರುವ ವಸ್ತುಗಳನ್ನು ನೀಡದ ಜೈಲಿನ ಅಧಿಕಾರಿಗಳ ವಿರುದ್ದ ಮನವಿ ಮಾಡಿದ್ದು, ಅದರ ಅರ್ಜಿ ವಿಚಾರಣೆ ಬೆಂಗಳೂರಿನ57ನೇ ಸೇಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಜೈಲಾಧಿಕಾರಿಗಳು ಕೋರ್ಟ್ ಆದೇಶ ಪಾಲಿಸಿದ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್ ನಲ್ಲಿ ಕೊಲೆ ಆರೋಪಿ ದರ್ಶನ್ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ನಡೆಯಿತು. ಕೋರ್ಟಿಗೆ ಖುದ್ದು ಹಾಜರಾದ ಜೈಲು ಅಧಿಕ್ಷಕ ಸುರೇಶ್ ಕೋರ್ಟಿಗೆ ಹಾಜರಾದರು. ಈ ವೇಳೆ ಜೈಲು ಅಧಿಕ್ಷಕ ಸಂಪೂರ್ಣ ವರದಿ ಸಲ್ಲಿಸಿದ್ದಾರೆ.
ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟಿಗೆ ಜೈಲು ಅಧಿಕ್ಷಕ ವರದಿ ಸಲ್ಲಿಸಿದ್ದಾರೆ. ಕ್ವಾರಂಟೈನ್ ಸೆಲ್ ನಿಂದ ಬ್ಯಾರಕ್ ಗೆ ಸ್ಥಳಾಂತರಿಸಲು ನಟ ದರ್ಶನ್ ಕೋರಿದ್ದಾರೆ. ವಾಕ್ ಮಾಡಲು ಕಡಿಮೆ ಸಮಯ ಜಾಗ ನೀಡಿದ್ದಾರೆ. ಜೈಲಾಧಿಕಾರಿಗಳು ಕೋರ್ಟ್ ಆದೇಶ ಪಾಲಿಸಿದ ಆರೋಪ ಹಿನ್ನೆಲೆಯಲ್ಲಿ ಕೋರ್ಟ್ ನಲ್ಲಿ ಇದೀಗ ಕೊಲೆ ಆರೋಪಿ ದರ್ಶನ ವಿಚಾರಣೆ ನಡೆಯಿತು.
ಇನ್ನು ಜೈಲಿನಲ್ಲಿ ಹೆಚ್ಚುವರಿ ಹಾಸಿಗೆ ದಿಂಬು ನೀಡಿದ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಆರಂಭವಾಯಿತು. ಜೈಲು ಅಧಿಕಾರಿಗಳ ಪರವಾಗಿ ಎಸ್‍ಪಿಪಿ ಪ್ರಸನ್ನಕುಮಾರ್ ವಾದ ಆರಂಭಿಸಿದರು. ಜೈಲು ಕೈಪಿಡಿಯಂತೆ ಕ್ರಮ ಕೈಗೊಳ್ಳಲಾಗಿದೆ. ಟೆಲಿಫೋನ್ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಸಹ ಮಾಡಲಾಗಿದೆ. ಚಾದರ್, ಹಾಸಿಗೆ ದಿಂಬು ಕೊಡಲಾಗಿದೆ. ಪಲ್ಲಂಗ ಕೇಳಿದರೆ ಕೊಡಲು ಅವಕಾಶ ಇಲ್ಲ ಓಡಾಡಲು ಅವಕಾಶ ಕೇಳಿದರು ಅದನ್ನು ಸಹ ಕೊಟ್ಟಿದ್ದೇವೆ. ಎಷ್ಟು ಜಾಗವಿದಿಯೋ ಅಲ್ಲಿ ಅವಕಾಶ ಕೊಟ್ಟಿದ್ದೇವೆ . ಅದು ದೋಷಾರೋಪಕ್ಕಿಂತ ಮೊದಲು ನೀಡಬೇಕಾದ ವಿವರಣೆ ನೀಡಲಾಗಿದೆ. ಕ್ರಮ ಕೈಗೊಳ್ಳಲಾಗಿದೆ ಎಂದು ವಾದ ಅಂತ್ಯಗೊಳಿಸಿದರು.
ಬಳಿಕ ಆರೋಪಿ ದರ್ಶನ್ ಪರವಾಗಿ ಸುನಿಲ್ ವಾದ ಆರಂಭಿಸಿದರು. ಜೈಲಾಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ಅರ್ಥವಾಗಿಲ್ಲ ಅಧಿಕಾರಿಗಳಿಗೆ ಇಂಗ್ಲೀಷ್ ಬರುತ್ತಿಲ್ಲವೆಂದು ಕಾಣುತ್ತದೆ , ದರ್ಶನ್ ವಕೀಲರ ವಾದಕೆ ಎಸ್ ಪಿ ಪಿ ಪ್ರಸನ್ನ ಕುಮಾರ್ ತೀವ್ರ ಅಕ್ಷಯಪಾ ವ್ಯಕ್ತಪಡಿಸಿದರು ಇಂಗ್ಲಿಷ್ ಭಾಷೆ ಬರುತ್ತಿಲ್ಲವೆಂದೆಲ್ಲ ವಾದಿಸಬಾರದು ಘನತೆಗೆ ತಕ್ಕಂತೆ ವಾದಿಸಬೇಕು ಎಂದು ಪ್ರಸನ್ನ ಕುಮಾರ್ ಅಕ್ಷತಾ ವ್ಯಕ್ತಪಡಿಸಿದರು ಈ ವೇಳೆ ಸೌಮ್ಯ ಭಾಷೆಯಲ್ಲಿ ವಿವಾದಿಸಲು ಕೋರ್ಟ್ ಸೂಚನೆ ನೀಡಿತು.
ಕೋರ್ಟ್ ಆದೇಶದ ಪ್ರತಿಯನ್ನು ಎಸೆದಿದ್ದಾರೆ ಆರೋಪಿ ದರ್ಶನ್ ಪರ ವಕೀಲ ಸುನಿಲ್ ವಾದ ಮಂಡಿಸಿದರು ಚಿನ್ನದ ಮಂಚ ಕೇಳಿಲ್ಲ ಚಂಬುಲೋಟ ಚಾಪೆ ಕೊಟ್ಟಿದ್ದಾರೆ. ಆಗ ಸುಮ್ಮನೆ ಆರೋಪ ಮಾಡಬೇಡಿ ಆದೇಶ ಏನು ಪಾಲನೆ ಆಗಿಲ್ಲ ಹೇಳಿ ಆರೋಪಿ ದರ್ಶನ್ ಪರ ವಕೀಲರಿಗೆ ಸೂಚನೆ ಕೊಟ್ಟರು. ಕಾರ್ಪೆಟ್ ಚಾದರ್ ಮೊದಲೇ ಕೊಟ್ಟಿದ್ದರು ಕಂಬಳಿ ಮಾತ್ರ ಕೋರ್ಟ್ ಆದೇಶದ ಬಳಿಕ ಕೊಟ್ಟಿದ್ದಾರೆ ಬ್ಯಾರಕ್ ಒಳಗೆ ಮಾತ್ರ ಅರ್ಧ ಗಂಟೆ ಓಡಾಡಲು ಬಿಟ್ಟಿದ್ದಾರೆ ಹೊರಗಡೆ ಓಡಾಡಲು ಬಿಟ್ಟಿಲ್ಲ ಎಂದು ದರ್ಶನ್ ಪರ ವಕೀಲ ಸುನಿಲ್ ವಾದಿಸಿದರು.
ಈ ವೇಳೆ ಜೈಲು ಅಧಿಕಾರಿಗಳಿಗೆ ಆರೋಪಿಗಳ ರಕ್ಷಣೆಯ ಹೊಣೆ ಇದೆ ಅದನ್ನು ಅವರು ಪರಿಗಣಿಸಬೇಕಲ್ಲವೇ? ಎಂದು ಜಡ್ಜ್ ಕೇಳಿದರು. ದರ್ಶನ್ ಗೆ ಪ್ರತ್ಯೇಕ ರಿಜಿಸ್ಟರ್ ಇಟ್ಟಿದ್ದಾರೆ. ಯಾರು ನೋಡಲು ಬರುತ್ತಾರೆ ಎಂದು ನಮೂದಿಸಬೇಕಿದೆ ಎಂದು ಆರೋಪಿ ದರ್ಶನ್ ಪರ ವಕೀಲ ಸುನಿಲ್ ಇದೆ ವೇಳೆ ತಿಳಿಸಿದರು. ಆಗ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಕಾನೂನು ಸವ್ಯವಸ್ಥೆ ಕಾಪಾಡುವುದು ಪೊಲೀಸರ ಹಣೆ ಅದನ್ನು ಗಮನದಲ್ಲಿ ಇಟ್ಟು ಅವರು ಕ್ರಮ ಕೈಗೊಳ್ಳಬಹುದು ಎಂದು ಜಡ್ಜ್ ತಿಳಿಸಿದರು.
ದರ್ಶನ್ ಗೆ ಕ್ವಾರಂಟೈನ್ ಸೆಲ್ ನಲ್ಲಿ ಇಟ್ಟಿದ್ದಾರೆ. ಬೇರೆ ಯಾರಿಗೂ ಈ ರೀತಿ ಕ್ವಾರಂಟೈನ್ ಸೆಲ್ ನಲ್ಲಿ ಇಟ್ಟಿಲ್ಲ. ದರ್ಶನ್ ಗೆ ಮಾತ್ರ ಯಾಕೆ ಕ್ವಾರಂಟೈನ್ ಸೆಲ್ ನಲ್ಲಿ ಇಟ್ಟಿದ್ದಾರೆ? ಕಾನೂನು ಅಂದ್ರೆ ಎಲ್ಲರಿಗೂ ಸಹ ಒಂದೇ ಅಲ್ವಾ? ಸೆಲೆಬ್ರಿಟಿ ರಕ್ಷಣೆಗೆ ಕ್ರಮ ಎಂದೆಲ್ಲಾ ಹೇಳುತ್ತಿದ್ದಾರೆ. ಆದರೆ ಉಗ್ರರಿಗೆ ಇರಿಸುವ ಸೆಲ್ ನಲ್ಲಿ ಇಟ್ಟಿದ್ದಾರೆ ಎಂದು ದರ್ಶನ್ ಪರ ವಕೀಲ ಸುನಿಲ್ ವಾದಿಸಿದರು.
ಈ ವೇಳೆ ದರ್ಶನ್ ಪರ ವಕೀಲ ಸುನೀಲ್ ಯಾವ ಕೈದಿಗೆ ಯಾವ ಸೆಲ್ ನೀಡಬೇಕು ಎಂದು ಕೈಪಿಡಿಯಲ್ಲಿದೆ. ಕೇಂದ್ರ ಸರ್ಕಾರದ ಜೈಲು ಕೈಪಿಡಿಯನ್ನು ಸಹ ಜೈಲಾಧಿಕಾರಿಗಳು ಪಾಲಿಸುತ್ತಿಲ್ಲ ಉತ್ತಮ ಆಹಾರ ಹಾಸಿಗೆ ನೀರು ಗಳಿಗೆ ಅವಕಾಶ ಇರಬೇಕು. ತೇಲಿನ ಹೊರ ಜಗತ್ತಿನ ಸಂಪರ್ಕವು ಕೈದಿಗಳಿಗಿರಬೇಕು ಈ ಮಾರ್ಗ ಸೂಚಿಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಓದಿಸಿದರು ಈ ವೇಳೆ ಕೋರ್ಟ್ ವಾದ ಪ್ರತಿವಾದ ಆಲಿಸಿದ ಬಳಿಕ ಕೆಲಕಾಲ ವಿಚಾರಣೆ ಮುಂದೂಡಿತು.