ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಹಣಕಾಸಿನ ವಿಚಾರದಲ್ಲಿ ವ್ಯವಹಾರದಲ್ಲಿ ಭಾರಿ ಅಕ್ರಮ ನಡೆದಿದ್ದು, ಶೀಘ್ರದಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಸೂಪರ್ ಸೀಡ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಕಸಾಪ ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರ ಇದೀಗ ಚಿಂತನೆ ನಡೆಸುತ್ತಿದೆ. ಹಾಗಾಗಿ ಹಾಲಿ ಅಧ್ಯಕ್ಷರಾಗಿರುವ ಮಹೇಶ್ ಜೋಶಿ ಅವರ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ.
ಹೌದು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಆರ್ಥಿಕ ಅವ್ಯವಹಾರ ತನಿಖೆಗೆ ವಿಚಾರಣಾಧಿಕಾರಿ ನೇಮಕ ಮಾಡಿತ್ತು. ತನಿಖೆಗೆ ವಿಚಾರಣಾಧಿಕಾರಿ ನೇಮಿಸಿ ಸಹಕಾರ ಇಲಾಖೆ ಆದೇಶ ಹೊರಡಿಸಿತ್ತು. 2002 ರಿಂದ ಇಲ್ಲಿಯ ತನಕ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೋಟ್ಯಾಂತರ ರೂಪಾಯಿ ಹಣಕಾಸಿನ ಅವ್ಯವಹಾರ ನಡೆದಿವೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಅದಕ್ಕೆ ಸಂಬಂಧಪಟ್ಟಂತೆ ಸಹಕಾರ ಇಲಾಖೆ ವಿಚಾರಣಾಧಿಕಾರಿ ನೇಮಕ ಮಾಡಿದ್ದು ವಿಚಾರಣೆ ಬಳಿಕ ಆಡಿಟ್ ವರದಿಗಳನ್ನು ಸರ್ಕಾರ ಪಡೆದುಕೊಂಡಿತ್ತು.
ಹಿರಿಯ ಅಧಿಕಾರಿಗಳಿಂದ ಆಡಿಟ್ ಪರಿಶೀಲನೆ ಆದ ಬಳಿಕ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಕಷ್ಟು ಆರ್ಥಿಕ ವ್ಯಹಾರ ಮತ್ತು ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸೂಪರ್ ಸೀಡ್ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಧ್ಯಕ್ಷರಾಗಿರುವ ಮಹೇಶ್ ಜೋಶಿ ಅವರನ್ನು ಕೆಳಗಿಳಿಸಿ ಆಡಳಿತ ಅಧಿಕಾರಿ ನೇಮಕ ಮಾಡುವ ಕುರಿತು ಸರ್ಕಾರ ವಲಯದಲ್ಲಿ ಚಿಂತನೆ ನಡೆದಿದೆ.
2022 ರಿಂದ ಇಲ್ಲಿಯವರೆಗೂ ನಿರಂತರವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ಸಾಕಷ್ಟು ಅಕ್ರಮ ಅವ್ಯವಹಾರ ನಡೆದಿದೆ. ಪರಿಷತ್ತಿನ ಹಣವನ್ನು ಅಧ್ಯಕ್ಷರ ಕುಟುಂಬದ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗಿದೆ. ಮತ್ತು ವಾಹನಗಳ ಖರೀದಿಯಲ್ಲಿ ಲೋಪದೋಷಗಳು ಆಗಿವೆ. ಕಂಪ್ಯೂಟರ್, ಪುಸ್ತಕಗಳ ಪ್ರಕಟಣೆ, ಸಿಸಿಟಿವಿ ಅಳವಡಿಕೆ ಈ ಎಲ್ಲಾ ಹಣವನ್ನು ದುರ್ಬಳಕೆ ಮಾಡಿಕೊಂಡಿರುವಂತಹದ್ದು ಕಂಡುಬಂದಿದೆ.
ಅಷ್ಟೆ ಅಲ್ಲದೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗಳಿಗೆ ಬರುವಂತಹ CSR ಹಣವನ್ನು ಸಹ ಕೂಡ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಅದಕ್ಕೆ ಸಂಬಂಧಪಟ್ಟಂತೆ ಜುಲೈ ಮೊದಲ ವಾರದಲ್ಲಿ ಸಹಕಾರ ಇಲಾಖೆ ವಿಚಾರಣೆಗೆ ಕೂಡ ಆದೇಶ ನೀಡಿತ್ತು. ಈ ಒಂದು ಆಡಿಟ್ ವರದಿಯನ್ನು ಆಧರಿಸಿ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ ಅನ್ನು ಸೂಪರ್ ಸೀಡ್ ಮಾಡುವ ಸಾಧ್ಯತೆಗಳು ದಟ್ಟವಾಗಿವೆ ಎಂದು ತಿಳಿದು ಬಂದಿದೆ.