ಚಿಕ್ಕಮಗಳೂರು : ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದು ಕೋಟ್ಯಾಂತರ ರೂಪಾಯಿ ವಂಚನೆ ಎಸಗುತ್ತಿದ್ದ ತೆಲಂಗಾಣ ಮೂಲದ ಇಬ್ಬರು ಆರೋಪಿಗಳನ್ನು ಇದೀಗ ಚಿಕ್ಕಮಂಗಳೂರು ಸೆನ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಮಠ ಸೇರಿದಂತೆ ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಪ್ರಸಾದ, ಪೂಜ್ಯ ಹೆಸರಲ್ಲಿ ಈ ಇಬ್ಬರು ಆರೋಪಿಗಳು ನಕಲಿ ವೆಬ್ಸೈಟ್ ಓಪನ್ ಮಾಡಿ, ಹಣ ಪಡೆದು ವಂಚನೆ ಎಸಗುತ್ತಿದ್ದರು. ಹಣ ಪಡೆದು ವಂಚನೆ ಎಸಗುತ್ತಿದ್ದ ತೆಲಂಗಾಣದ ಮೂಲದ ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ. ತೆಲಂಗಾಣ ಮೂಲದ ಸುದೀಪ್ ಮತ್ತು ಅನಿಲ್ ಕುಮಾರ್ ಬಂಧಿತ ಆರೋಪಿಗಳು.
ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆ ಡಿವೈಎಸ್ಪಿ ನೇತೃತ್ವದಲ್ಲಿ ಅರೆಸ್ಟ್ ಮಾಡಲಾಗಿದೆ. www.devaraseve.com ಹೆಸರಿನಲ್ಲಿ ಪ್ರತಿಷ್ಠಿತ ದೇವಾಲಯಗಳ ಹೆಸರು ಬಳಕೆ ಮಾಡುತ್ತಿದ್ದರು. ರಾಜ್ಯ ಮತ್ತು ದೇಹದ ಪ್ರತಿಷ್ಠಿತ ದೇಗುಲಗಳ ಬಗ್ಗೆ ವೆಬ್ಸೈಟ್ನಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದು, ವಿಶೇಷ ಪೂಜೆ, ಪ್ರಸಾದ ಮತ್ತು ವಿಶೇಷ ಸೇವೆ ಹೆಸರಿನ ಲಿಂಕ್ ಅಲ್ಲಿ ವಂಚನೆ ಎಸಗುತ್ತಿದ್ದರು.
ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಹೆಸರಿನಲ್ಲಿ ಕೂಡ ಹಣ ಪಡೆದು ವಂಚನೆ ವಂಚನೆಯ ಬಗ್ಗೆ ಹೊರನಾಡು ದೇವಾಲಯಕ್ಕೆ ನಿರಂತರವಾಗಿ ದೂರು ಬಂದ ಹಿನ್ನೆಲೆಯಲ್ಲಿ ನಕಲಿ ವೆಬ್ಸೈಟ್ ಸಂಬಂಧಪಟ್ಟ ಕಳೆದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೊರನಾಡು ದೇವಾಲಯದ ಉಪ ವ್ಯವಸ್ಥಾಪಕರ ರಾಘವೇಂದ್ರ ಅವರು ದೂರು ದಾಖಲಿಸಿದ್ದರು. ಚಿಕ್ಕಮಗಳೂರು ಎಸ್ ಪಿ ವಿಕ್ರಮ್ ಅವರು ವಿಶೇಷ ತಂಡ ರಚಿಸಿದ್ದರು.