ಬೆಂಗಳೂರು: ರಾಜ್ಯಾಧ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಯುತ್ತಿದೆ. ಮನೆ ಮನೆಗೆ ತೆರಳಿ ಗಣತಿದಾರರು ಜಾತಿಗಣತಿ ಸಮೀಕ್ಷೆ ನಡೆಸುತ್ತಿದ್ದಾರೆ. ಸಾರ್ವಜನಿಕರಾದಂತ ನೀವು ಗಣತಿದಾರರು ಬರುವವರೆಗೂ ಕಾಯುವ ಅಗತ್ಯವಿಲ್ಲ. ಆನ್ ಲೈನ್ ನಲ್ಲಿಯೇ ಅರ್ಜಿ ತುಂಬಿ, ನಿಮ್ಮ ಮಾಹಿತಿಯನ್ನು ದಾಖಲಿಸಬಹುದಾಗಿದೆ. ಆ ಬಗ್ಗೆ ವೀಡಿಯೋ ಮುಂದಿದೆ ನೋಡಿ..
ಹೌದು ನೀವು ಗಣತಿದಾರರನ್ನು ಕಾಯಬೇಕಾಗಿಲ್ಲ. ಆನ್ ಲೈನ್ ನ ಸಿಂಪಲ್ ಪ್ರೊಸಿಜರ್ ಮೂಲಕ ಸ್ವತಹ ನೀವೇ ಅಪ್ಲಿಕೇಷನ್ ಫಿಲ್ ಮಾಡಿ, ಸಬ್ ಮಿಟ್ ಮಾಡಬಹುದಾಗಿದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ.. ಈ ಕಳಗಿನ ಹಂತ ಅನುಸರಿಸಿ, ಆನ್ ಲೈನ್ ನಲ್ಲೇ ಜಾತಿಗಣತಿ ಸಮೀಕ್ಷೆಯ ಎಲ್ಲಾ ಮಾಹಿತಿ ದಾಖಲಿಸಿ.
ಈ ವೀಡಿಯೋ ನೋಡಿ, ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಭರ್ತಿ ಮಾಡಿ
ಆನ್ ಲೈನ್ ನಲ್ಲಿ ಜಾತಿ ಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ, ನಿಮ್ಮ ಮಾಹಿತಿಯನ್ನು ಹೀಗೆ ದಾಖಲಿಸಿ
- ಮೊದಲನೆಯದಾಗಿ ನೀವು https://kscbcelfdeclaration.karnataka.gov.in ಜಾಲತಾಣಕ್ಕೆ ಭೇಟಿ ನೀಡಬೇಕು.
- ಅಲ್ಲದೇ ನಿಮ್ಮ ಬಾಗಿಲ ಮೇಲೆ ವಿದ್ಯುತ್ ಬಿಲ್ ಕಲೆಕ್ಟರ್ ಅಂಟಿಸಿರುವಂತ ಸ್ಟಿಕ್ಕರ್ ನಲ್ಲಿ ಇರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ಸೆಲ್ಫ್ ಡಿಕ್ಲರೇಶನ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.
- ಬಳಕೆದಾರರು ಸ್ವಯಂ ಘೋಷಣೆಯೊಂದಿಗೆ ಮುಂದುವರಿಯಲು ನಾಗರಿಕ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
- ಬಳೆಕಾದರರು ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಪಡೆಯಬೇಕು.
- ಬಳಕೆದಾರರು ಲಾಗಿನ್ ಆಗಲು OTP ನಮೂದಿಸಬೇಕು.
- ಪ್ರಾರಂಭಿಸಲು ಹೊಸ ಸಮೀಕ್ಷೆಯನ್ನು ಪ್ರಾರಂಭಿಸಿ ಮೇಲೆ ಕ್ಲಿಕ್ ಮಾಡಿ.
- ಬಳಕೆದಾರರು ತಮ್ಮ UHID ಅನ್ನು ನಮೂದಿಸಿ ಮತ್ತು Verify UHID ಮೇಲೆ ಕ್ಲಿಕ್ ಮಾಡಬೇಕು.
- ಬಳಕೆದಾರರು UHID ಹೊಂದಿಲ್ಲದಿದ್ದರೇ I don’t have a UHID ಮೇಲೆ ಕ್ಲಿಕ್ ಮಾಡಿ ಮತ್ತು ESCOM ಖಾತೆ ID ನಮೂದಿಸಿ.
- ಸಮೀಕ್ಷೆಯಲ್ಲಿ ಭಾಗವಹಿಸುವವರ ಪೋಟೋ ಕ್ಲಿಕ್ ಮಾಡಿ, ಅಪ್ ಲೋಡ್ ಮಾಡಿ.
- ಬಳಕೆದಾರರು ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬೇಕು.
- ಪಡಿತರ ಚೀಟಿ ಆಗಿದ್ದರೇ ಬಳಕೆದಾರರು ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ Submit RC Info ಮೇಲೆ ಕ್ಲಿಕ್ ಮಾಡಿ. ನಂತ್ರ ಮುಂದುವರಿಸಲು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
- ಆಧಾರ್ ಆಗಿದ್ದರೇ ಬಳಕೆದಾರರು ಮನೆಯ ಮುಖ್ಯಸ್ಥರ ಆಧಾರ್ ಕಾರ್ಡ್ ನಲ್ಲಿ ಇರುವಂತೆ ಹೆಸರನ್ನು ನಮೂದಿಸಬೇಕು. ಆಧಾರ್ ಓಟಿಪಿ ಅನ್ನು ದೃಢೀಕರಿಸಿ ಎನ್ನುವಲ್ಲಿ ಕ್ಲಿಕ್ ಮಾಡಬೇಕು.
- ಬಳಕೆದಾರರು ಓಟಿಪಿ ಅಥವಾ ಫೇಸ್ ಕ್ಯಾಪ್ಚರ್ ಆಯ್ಕೆ ಮಾಡಬಹುದು. ಓಟಿಪಿ ಆಗಿದ್ದರೇ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಓಟಿಪಿಯನ್ನು ನಮೂದಿಸಿ.
- ಫೇಸ್ ಕ್ಯಾಪ್ಚರ್ ಆಗಿದ್ದರೇ ಬಳಕೆದಾರರು CeG Face KYC ಮೊಬೈಲ್ ಅಪ್ಲಿಕೇಷನ್ ನೊಂದಿಗೆ ಕ್ಯೂ ಆರ್ ಕೋಟ್ ಅನ್ನು ಸ್ಕ್ಯಾನ್ ಮಾಡಬೇಕು.
- ಬಳಕೆದಾರರು ಅಪ್ಲಿಕೇಷನ್ ಇರುವ ಪೋನ್ ನ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಸ್ಕ್ಯಾನ್ ಕ್ಯೂ ಆರ್ ಮೇಲೆ ಕ್ಲಿಕ್ ಮಾಡಬೇಕು. ಸ್ಕ್ಯಾನ್ ಮಾಡಿದ ನಂತ್ರ ಬಳಕೆದಾರರು ಅಪ್ಲಿಕೇಷನ್ ನಲ್ಲಿ ಫೇಸ್ ಕ್ಯಾಪ್ಚರ್ ಅನ್ನು ಪೂರ್ಣಗೊಳಿಸಬೇಕು.
- ಇ-ಕೈವೈಸಿಯ ನಂತ್ರ ಬಳಕೆದಾರರು ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿ ಮುಂದುವರಿಸಬೇಕು. ಮನೆಯ ಮುಖ್ಯಸ್ಥರ ಇಕೈವೈಸಿ ನಂತ್ರ ಬಳಕೆದಾರರು ಕುಟುಂಬದ ಸದಸ್ಯರವನ್ನು ಸೇರಿಸಬೇಕು.
- ಸದಸ್ಯರನ್ನು ಸೇರಿಸಲು ಸದಸ್ಯರನ್ನು ಸೇರಿಸಿ ಮೇಲೆ ಕ್ಲಿಕ್ ಮಾಡಿ ಮತ್ತು ಸದಸ್ಯರ ಇಕೈವೈಸಿಯನ್ನು ಪೂರ್ಣಗೊಳಿಸಿ.
- ಸದಸ್ಯರ ಮಾಹಿತಿ ಪಡಿತರ ಚೀಟಿಯಿಂದ ಪಡೆಯಲಾಗಿದ್ದರೇ ಮತ್ತು ಯಾವುದೇ ಸದಸ್ಯರು ಜೀವಂತವಾಗಿಲ್ಲದಿದ್ದರೇ, ಸದಸ್ಯರನ್ನು ಮೃತ ಎಂದು ಗುರುತಿಸಬೇಕು. ಮೃತ ಮೇಲೆ ಕ್ಲಿಕ್ ಮಾಡಿ ಮತ್ತು ಖಚಿತ ಪಡಿಸಬೇಕು.
- ಎಲ್ಲಾ ಕುಟುಂಬದ ಸದಸ್ಯರನ್ನು ಸೇರಿಸಿದ ನಂತ್ರ ಮನೆಯ ಮುಖ್ಯಸ್ಥರನ್ನು ಆಯ್ಕೆ ಮಾಡಿ, ಮೊಬೈಲ್ ಸಂಖ್ಯೆ ಮತ್ತು ಓಟಿಪಿ ನಮೂದಿಸಿ ಮತ್ತು ಸಮೀಕ್ಷೆಯನ್ನು ಪ್ರಾರಂಭಿಸಿ.
- ಬಳಕೆದಾರರು ಎಲ್ಲಾ ಸದಸ್ಯರಿಗೆ ವೈಯಕ್ತಿಕ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಮತ್ತು ನಂತ್ರ ಕುಟುಂಬದ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು.
- ಪ್ರಶ್ನಾವಳಿಯನ್ನು ಪೂರ್ಣಗೊಳಿಸಿದ ನಂತ್ರ ಸಲ್ಲಿಸಿ ಕ್ಲಿಕ್ ಮಾಡಿ.
- ಬಳಕೆದಾರರು ಸಮೀಕ್ಷೆಯನ್ನು ಸಲ್ಲಿಸುವ ಮೊದಲು ಅದರ ಪೂರ್ವ ವೀಕ್ಷಣೆಯನ್ನು ನೋಡಬಹುದಾಗಿದೆ.
- ಬಳಕೆದಾರರು ಸ್ವಯಂ ಘೋಷಣೆ ದಾಖಲೆಯ ಪೋಟೋವನ್ನು ಕ್ಲಿಕ್ ಮಾಡಿ ಅಪ್ ಲೋಡ್ ಮಾಡಬೇಕು.
- ಸಲ್ಲಿಸಿದ ನಂತ್ರ ಬಳಕೆದಾರರಿಗೆ ಅಪ್ಲಿಕೇಷನ್ ಸಂಖ್ಯೆ ಸಿಗುತ್ತದೆ.
ಬಿಜೆಪಿಗರು ಸಮೀಕ್ಷೆ ಬಹಿಷ್ಕರಿಸಲು ಕರೆ ನೀಡಿ, ಜನರೆದುರು ಬೆತ್ತಲು: ಸಿಎಂ ಸಿದ್ಧರಾಮಯ್ಯ
ರಾಜ್ಯದಲ್ಲಿ ‘ಸಮೀಕ್ಷಾ ಕಾರ್ಯ’ಕ್ಕೆ ಗೈರಾದವರಿಗೆ ಶಾಕ್: ’68 ಗಣತಿದಾರ’ರಿಗೆ ಸರ್ಕಾರ ನೋಟಿಸ್