ತಮಿಳುನಾಡು : ತಮಿಳುನಾಡಿನಲ್ಲಿ ನಟ ವಿಜಯ್ ರ‍್ಯಾಲಿಯಲ್ಲಿ 40 ಜನರು ಸಾವನಪ್ಪಿದು 50 ಜನರ ಸತಿ ಗಂಭೀರವಾಗಿದೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರೂರಿನಲ್ಲಿ ತಮಿಳುನಾಡು ಬಿಜೆಪಿ ನಾಯಕ ಅಣ್ಣಮಲೈ ಇದರಲ್ಲಿ ನಟ ವಿಜಯ್ ಅವರ ಯಾವುದೇ ತಪ್ಪು ಇಲ್ಲ ಈ ಒಂದು ದುರಂತಕ್ಕೆ ರಾಜ ಸರ್ಕಾರ ಹಾಗೂ ಪೊಲೀಸರ ವೈಫಲ್ಯವೇ ಕಾರಣ ಈ ಒಂದು ಪ್ರಕರಣದ ತನಿಖೆಯನ್ನು ತಕ್ಷಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದುರಂತಕ್ಕೆ ರಾಜ್ಯ ಸರ್ಕಾರ ಹಾಗೂ ಪೊಲೀಸರೇ ನೇರ ಹೊಣೆಯಾಗಿದ್ದಾರೆ. ಇದರಲ್ಲಿ ನಟ ರಾಜಕಾರಣಿ, ವಿಜಯ್ ತಪ್ಪು ಏನು ಇಲ್ಲ. ವಿಜಯ್ ರ್ಯಾಲಿಗೆ ಅನುಮತಿ ನೀಡಿದ್ದು ಸ್ಥಳೀಯ ಆಡಳಿತ 10,000 ಜನ ಸೇರುತ್ತಾರೆ ಎಂದು ಅನುಮತಿ ಕೇಳಿದ್ರು ಅಂತಾರೆ. ಹಾಗಾದರೆ ಗುಪ್ತಚರ ದಳ ಇದರಲ್ಲಿ ವಿಫಲ ಆಗಿದೆಯಾ?ಪೊಲೀಸರಿಗೆ ಗೊತ್ತಿಲ್ವಾ ವಿಜಯ್ ದೊಡ್ಡ ಸ್ಟಾರ್ ಎಂದು? ಇಲ್ಲಿನ ಡಿಸಿ ಮತ್ತು ಎಸ್ ಪಿ ಯನ್ನು ತಕ್ಷಣ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು.
ಇಷ್ಟಾದರೂ ಅಧಿಕಾರಿಗಳನ್ನು ಸರ್ಕಾರ ಸಸ್ಪೆಂಡ್ ಮಾಡಿಲ್ಲ. ಅಲ್ಲಿ ಒನ್ ಮ್ಯಾನ್ ತನಿಖೆಗೆ ಆದೇಶವನ್ನು ನೀಡಲಾಗಿದೆ. ಅವರು ರಾಜ್ಯ ಸರ್ಕಾರದ ವಿರುದ್ಧ ರಿಪೋರ್ಟ್ ನೀಡಲ್ಲ.ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಯಾರು ಹೇಳಿ ಮಾಡಿಸಿದರು ಅಂತ ಸಿಬಿಐ ತನಿಖೆಯಲ್ಲಿ ಗೊತ್ತಾಗುತ್ತದೆ. ಯಾರು ಇದಕ್ಕೆ ಕೊಟ್ಟರು ಎಂಬ ಮಾಹಿತಿ ಹೊರಬರುತ್ತದೆ. ಮೃತರ ಮನೆಗಳಿಗೆ ತೆರಳಿ ಪರಿಹಾರ ಚೆಕ್ ವಿತರಿಸುತ್ತೇವೆ ಎಂದು ಅಣ್ಣಾಮಲೈ ತಿಳಿಸಿದರು.