ಹಾಸನ : ಈಗ ಹಬ್ಬದ ಸೀಸನ್ ದಸರಾ, ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳು ಆರಂಭವಾಗಿದ್ದು, ಇದೇ ಸಮಯದಲ್ಲಿ ಜನರು ಬಟ್ಟೆ ಖರೀದಿಸಲು ಬಟ್ಟೆ ಅಂಗಡಿಗಳಲ್ಲಿ ಆಫರ್ ಗಳ ಮೊರೆ ಹೋಗುತ್ತಾರೆ. ಇಲ್ಲಿ ಹಾಸನದಲ್ಲಿ ಬಟ್ಟೆ ಆಫರ್ ಗೋಸ್ಕರ ಮುಗಿದ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಹೌದು ಬಟ್ಟೆ ಆಫರ್‌ಗೆ ಮುಗಿಬಿದ್ದ ಜನರನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಪ್ರಹಾರನಡೆಸಿದ ಘಟನೆ ಹಾಸನ ನಗರದ ಉದಯಗಿರಿ ಬಡಾವಣೆಯಲ್ಲಿ ನಡೆದಿದೆ. ಲಕ್ಷಿ ಬ್ಯಾಡ್ಮಿಂಟನ್ ಅಕಾಡೆಮಿ ಕಟ್ಟಡದಲ್ಲಿ ಬಟ್ಟೆ ಖರೀದಿಗೆ ಆಫರ್ ನೀಡಲಾಗಿತ್ತು.
ಅರುಣ್ ಅಡ್ಡ ಮೆನ್ಸ್ ವೇರ್‌ನವರು ಈ ಬಿಗ್ ಆಫರ್ ನೀಡಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಖರೀದಿಗೆ ನೂಕುನುಗ್ಗಲು ಉಂಟಾದ ಹಿನ್ನೆಲೆ ಪೊಲೀಸರು ಖರೀದಿಗೆ ಬಂದಿದ್ದ ಯುವಕರಿಗೆ ಲಾಠಿ ರುಚಿ ತೋರಿಸಿದ್ದಾರೆ. ಬಟ್ಟೆ ಖರೀದಿಸಲು ನೂಕುನುಗ್ಗಲು ಹೆಚ್ಚಾದ ಹಿನ್ನೆಲೆ ಖರೀದಿಗೆ ಬಂದಿದ್ದವರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ನಡೆಸಿದ್ದಾರೆ.