ಚಿತ್ರದುರ್ಗ : ಭಾರತದಲ್ಲಿರುವ ಎಲ್ಲಾ ಧರ್ಮದ ಅನುಯಾಯಿಗಳು ಹಿಂದೂಗಳೇ ಎಂದು ಸಾಣೆಹಳ್ಳಿ ತರಳಬಾಳು ಮಠದ ಪಂಡಿತರಾಧ್ಯ ಸ್ವಾಮೀಜಿ ಹೇಳಿಕೆ ನೀಡಿದರು.ಚಿತ್ರದುರ್ಗದ ಮುರುಘಾ ಮಠದಲ್ಲಿ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಈ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಖಂಡಿತ ಪ್ರಾದೇಶಿಕವಾಗಿ ಲಿಂಗಾಯತರು ಕೂಡ ಹಿಂದೂಗಳೇ, ಲಿಂಗಾಯತರು ಮಾತ್ರ ಅಲ್ಲ ಜೈನರು, ಬೌದ್ಧರು, ಕ್ರೈಸ್ತರು ಭಾರತದಲ್ಲಿರುವ ಎಲ್ಲಾ ಧರ್ಮದ ಅನುಯಾಯಿಗಳು ಹಿಂದೂಗಳು. ಬಸವಣ್ಣನವರು ದಯೆ ಮೂಲದ ಲಿಂಗಾಯತ ಧರ್ಮ ಕೊಟ್ಟಿದ್ದಾರೆ. ನಾವು ಲಿಂಗವಂತರೆಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಹೇಳಿಕೊಳ್ಳುವುದರಲ್ಲಿ ಮುಂದೆ ಇದ್ದೇವೆ. ಆಚರಣೆಯಲ್ಲಿ ಹಿಂದಿದ್ದೇವೆ ಎಂದು ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಂಡಿತರಾಧ್ಯ ಸ್ವಾಮೀಜಿ ಹೇಳಿಕೆ ನೀಡಿದರು.