ಕೋಲಾರ : ಸಿಎಂ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಬದ್ಧತೆ ಹಾಗೂ ಶೋಷಣೆ ಗೊತ್ತಿದೆ ಹಾಗಾಗಿಯೇ ಅವರು ಇಂದು ಜಾತಿಗಣತಿ ಮಾಡಿಸುತ್ತಿದ್ದಾರೆ. ಕುರುಬ ಸಮಾಜದವರು ಯಾಕೆ ಹಿಂದೂ ಧರ್ಮ ಬರೆಸಬೇಕು ಅಂದರೆ, ಹಿಂದೂ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದಂತವರು ಹಾಲುಮತಸ್ಥರು ಎಂದು ಕೋಲಾರದಲ್ಲಿ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಶ್ರೀಗಳು ಹೇಳಿಕೆ ನೀಡಿದರು.
ಕೋಲಾರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೇರೆ ಯಾರೇ ಸಿಎಂ ಇದಿದ್ದರೆ ಗಣತಿ ನಡೆಯುತ್ತಿರಲಿಲ್ಲ ಜನರ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಪರಿಸ್ಥಿತಿ ತಿಳಿಯಲು ಸಮೀಕ್ಷೆ ಮಾಡಲಾಗುತ್ತಿದೆ ಸಿಎಂ ಸಿದ್ದರಾಮಯ್ಯ ಕೈಗೊಂಡಿರುವ ಎರಡನೇ ಬಾರಿಯ ಸಮೀಕ್ಷೆ ಯಶಸ್ವಿಯಾಗಬೇಕು ರಾಜ್ಯದಲ್ಲಿ ಧರ್ಮ ಬರೆಸುವ ವಿಚಾರದಲ್ಲಿ ಸಾಕಷ್ಟು ಗೊಂದಲದಲ್ಲಿದ್ದಾರೆ. ಕೆಲವರು ವೀರಶೈವ ಅಂತ ಬರೆಸಿದರೆ ಕೆಲವರು ಲಿಂಗಾಯತ ಬರಿಸುತ್ತಾರೆ. ಕೆಲವರು ಹಿಂದೂ ಎಂದು ಮತ್ತೆ ಕೆಲವರು ಬೇರೆ ಧರ್ಮವನ್ನು ಬರೆಸುತ್ತಾರೆ.
ಯಾವುದೇ ಗೊಂದಲ ಉಪಜಾತಿಗಳಿಲ್ಲದ ಜಾತಿ ಎಂದರೆ ಕುರುಬ ಸಮಾಜ. ಇಂದು ಅಖಂಡ ಕರ್ನಾಟಕದಲ್ಲಿ ಕುರುಬ ಸಮಾಜಕ್ಕೆ ಯಾವುದೇ ಗೊಂದಲ ಇಲ್ಲ. ಕುರುಬ ಸಮಾಜದವರು ಯಾಕೆ ಹಿಂದೂ ಧರ್ಮ ಬರೆಸಬೇಕು ಅಂದರೆ, ಹಿಂದೂ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದಂತವರು ಹಾಲುಮತಸ್ಥರು. ಹಿಂದೂ ಸಂಸ್ಕೃತಿ ಪರಂಪರೆಯ ಬೀಜ ಹಾಕಿ ಬೆಳೆಸಿದವರು ಕುರುಬರು. ಹಾಗಾಗಿ ಕುರುಬರಿಗೆ ಕಾಲಂನಲ್ಲಿ ಹಿಂದೂ ಎಂದು ಬರೆಸಲು ಯಾವುದೇ ಸಂದೇಹ ಮತ್ತು ಗೊಂದಲಗಳಿಲ್ಲ ಎಂದು ಕೋಲಾರದಲ್ಲಿ ಕಾಗಿನೆಲೆ ಶಾಖಾಮಠದ ಈಶ್ವರಾನಂದಪುರಿ ಶ್ರೀಗಳು ಹೇಳಿಕೆ ನೀಡಿದರು