ಬೆಂಗಳೂರು: ಸೆಪ್ಟೆಂಬರ್ 22ರಿಂದ ರಾಜ್ಯಾಧ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಲಾಗುತ್ತಿದೆ. ಶಿಕ್ಷಕರ ಜಾತಿ ಗಣತಿ ಸಮೀಕ್ಷೆಗೆ ಸರ್ವರ್ ಸಮಸ್ಯೆ ಎದುರಾಗಿತ್ತು. ಇದರ ನಡುವೆ ಜಾತಿಗಣತಿ ಸಾಗಿದ್ದು, ಈವರೆಗೆ ಬರೋಬ್ಬರಿ 13 ಸಮೀಕ್ಷೆಯನ್ನು ಮಾಡಲಾಗಿದೆ.
ಈ ಕುರಿತಂತೆ ಸಿಎಂ ಕಚೇರಿಯಿಂದ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಸರ್ವರ್ ಸಮಸ್ಯೆ ನಡುವೆಯೂ ಹೆಣಗಾಡುತ್ತಲೇ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಯುತ್ತಿದೆ. ಸೆಪ್ಟೆಂಬರ್.22ರಿಂದ ಆರಂಭಗೊಂಡು, ಸೆಪ್ಟೆಂಬರ್.27ರ ಇಂದು ಸಂಜೆ 5.30ರವರೆಗೆ 12,87,087 ಮನೆಗಳ ಜಾತಿಗಣತಿ ಸಮೀಕ್ಷೆಯನ್ನು ನಡೆಸಲಾಗಿದೆ.
ಹೀಗಿದೆ ಜಿಲ್ಲಾವಾರ ಜಾತಿಗಣತಿ ಸಮೀಕ್ಷೆಯ ವಿವರ
- ಬಾಗಲಕೋಟೆ – 55,459
- ಬಳ್ಳಾರಿ – 27,799
- ಬೆಳಗಾವಿ -96,167
- ಬೆಂಗಳೂರು ಗ್ರಾಮಾಂತರ – 22,984
- ಬೆಂಗಳೂರು ಸೌತ್ – 32,610
- ಬೆಂಗಳೂರು ನಗರ – 9,586
- ಬೀದರ್ – 26,345
- ಚಾಮರಾಜನಗರ – 24,688
- ಚಿಕ್ಕಬಳ್ಳಾಪುರ – 28,845
- ಚಿಕ್ಕಮಗಳೂರು -41,634
- ಚಿತ್ರದುರ್ಗ -55,531
- ದಕ್ಷಿಣ ಕನ್ನಡ – 24,309
- ದಾವಣಗೆರೆ – 62,055
- ಧಾರವಾಡ – 49,599
- ಗದಗ- 44,213
- ಹಾಸನ- 50,713
- ಹಾವೇರಿ -74,477
- ಕಲಬುರ್ಗಿ-54,048
- ಕೊಡಗು-15,686
- ಕೋಲಾರ-40,348
- ಕೊಪ್ಪಳ-52,773
- ಮಂಡ್ಯ-63,488
- ಮೈಸೂರು-45,883
- ರಾಯಚೂರು-33,753
- ಶಿವಮೊಗ್ಗ-48,590
- ತುಮಕೂರು-61,238
- ಉಡುಪಿ-13,841
- ಉತ್ತರ ಕನ್ನಡ -42,159
- ವಿಜಯನಗರ-29,748
- ವಿಜಯಪುರ-33,619
- ಯಾದಗಿರಿ-24,899
ಒಟ್ಟಾರೆಯಾಗಿ ಬೆಂಗಳೂರು ನಗರದಲ್ಲಿ 9,586 ಅತೀ ಕಡಿಮೆ ಜಾತಿಗಣತಿ ಸಮೀಕ್ಷೆ ನಡೆದಿದ್ದರೇ, ಹಾವೇರಿಯಲ್ಲಿ 74,477 ಅತೀ ಹೆಚ್ಚು ಜಾತಿಗಣತಿ ಸಮೀಕ್ಷೆಯನ್ನು ಈವರೆಗೆ ನಡೆಸಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು