ಬೆಂಗಳೂರು: ಸಾರಿಗೆ ಬಸ್ಸುಗಳಿಗೆ ಆಯುಧ ಪೂಜೆಗೆ ಈ ಹಿಂದೆಯಿಂದ ನೀಡಲಾಗುತ್ತಿದ್ದ ರೂ.100 ಅನ್ನು 2024 ರಿಂದಲೇ ರೂ.250 ಕ್ಕೆ ಹೆಚ್ಚಿಸಲಾಗಿದೆ. ಆದರೆ ಈ ಬಗ್ಗೆ ಕೆಲವೊಂದು ಮಾಧ್ಯಮಗಳಲ್ಲಿ ಆಯುಧಪೂಜೆಗೆ ಪ್ರತಿ ಬಸ್ಸಿಗೆ ರೂ.150 ಎಂದು ತಪ್ಪಾಗಿ ವರದಿಯಾಗಿದೆ ಎಂಬುದಾಗಿ ಕೆ ಎಸ್ ಆರ್ ಟಿ ಸಿ ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೆ ಎಸ್ ಆರ್ ಟಿ ಸಿ ಮಾಹಿತಿ ನೀಡಿದ್ದು, ಆಯುಧಪೂಜೆಗೆ 2008 ರವರೆಗೂ ಪ್ರತಿ ಬಸ್ಸಿಗೆ ರೂ.10 ನೀಡಲಾಗುತ್ತಿತ್ತು, ಇದನ್ನು 2009 ರಲ್ಲಿ ಪ್ರತಿ ಬಸ್ಸಿಗೆ ರೂ 30 ಕ್ಕೆ ಏರಿಕೆ ಮಾಡಲಾಯಿತು. 2016 ರಲ್ಲಿ ಪ್ರತಿ ಬಸ್ಸಿಗೆ ರೂ.50 ಕ್ಕೆ ಏರಿಕೆ ಮಾಡಲಾಯಿತು ತದನಂತರ 2017 ರಲ್ಲಿ ಪ್ರತಿ ಬಸ್ಸಿಗೆ ರೂ.100 ಕ್ಕೆ ಏರಿಕೆ ಮಾಡಲಾಗಿತ್ತು ಎಂದು ನಿಗಮ ತಿಳಿಸಿದೆ.
ಮುಂದುವರೆದು, 2023 ರವರೆಗೂ ಪ್ರತಿ ಬಸ್ಸಿಗೆ ನೀಡುತ್ತಿದ್ದ ರೂ100 ಅನ್ನು 2024 ರಿಂದ ರೂ.250 ಕ್ಕೆ ಹೆಚ್ಚಿಸಲಾಗಿದೆ. ಘಟಕಗಳಲ್ಲಿನ ಬಸ್ಸುಗಳನ್ನು ಒಟ್ಟಾರೆಯಾಗಿ ಪರಿಗಣಿಸಿ ಪ್ರತಿಯೊಂದು ಘಟಕಕ್ಕೆ ಪ್ರತಿ ಬಸ್ ಗೆ ಅಂದರೆ ಕನಿಷ್ಟ 100 ಬಸ್ಸುಗಳಿರುತ್ತವೆ ಎಂದು ಹೇಳಿದೆ.