ಬೆಂಗಳೂರು: ಮದ್ದೂರು ಗಣೇಶ ಮೆರವಣೆಗೆ ಮೇಲೆ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯಿಂದ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಇಂದು ತನ್ನ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಸಲ್ಲಿಸಿದೆ. ಆ ವರದಿಯಲ್ಲಿ ಏನಿದೆ ಅಂತ ಮುಂದೆ ಓದಿ.
ಬಿಜೆಪಿ ಸತ್ಯಶೋಧನಾ ಸಮಿತಿ ವರದಿಯಲ್ಲಿನ ಘಟನೆಯ ಸಾರಾಂಶ ಹೀಗಿದೆ..
2025ರ ಸೆಪ್ಟೆಂಬರ್ 7 ಭಾನುವಾರ, ಸಂಜೆ 7 ಗಂಟೆಗೆ ಮದ್ದೂರಿನ ಆರ್ ಆರ್ ನಗರ ( ರಾಮ್ ರಹೀಮ್ ನಗರ ) 6ನೇ ಕ್ರಾಸಿನಲ್ಲಿ ಕೂರಿಸಿದ ಗಣಪತಿ ಮೆರವಣಿಗೆ ಪ್ರಾರಂಭವಾಗುತ್ತದೆ. 7 ಗಂಟೆ 15 ನಿಮಿಷಕ್ಕೆ ಆರ್ ಆರ್ ನಗರದ ಪ್ರಮುಖ ಬೀದಿಗಳಲ್ಲಿ ಹೊರಟ ಗಣಪತಿ ಉತ್ಸವವು ಆರ್ ಆರ್ ನಗರದ ಮಸೀದಿ ಮುಂಭಾಗ ಗಣಪತಿ ಮೆರವಣಿಗೆ ಬಂದಾಗ ಪೊಲೀಸಿನವರ ಮನವಿ ಮೇರೆಗೆ ಮೆರವಣಿಗೆಯಲ್ಲಿದ್ದ ತಮಟೆ ಮತ್ತು ನಾದಸ್ವರವನ್ನು ನಿಲ್ಲಿಸಿ ಶಾಂತ ರೀತಿಯಲ್ಲಿ ಗಣಪತಿ ಉತ್ಸವ ಪ್ರಾರಂಭವಾಗುತ್ತದೆ. ಉತ್ಸವ ಮಸೀದಿಯಿಂದ ಮುಂಭಾಗ ಹೊರಟ ತಕ್ಷಣ ಬೀದಿ ದೀಪಗಳು ಆರಿಸಲಾಗುತ್ತದೆ.
ಉದ್ದೇಶಪೂರ್ವಕವಾಗಿ ಬೀದಿ ದೀಪಗಳನ್ನು ಆರಿಸಿ ಮಸೀದಿ ಮೇಲಿಂದ ಮತ್ತು ಕಟ್ಟಡಗಳ ಮೇಲಿಂದ ಗಣಪತಿ ಮೆರವಣಿಗೆ ಮೇಲೆ ಕಲ್ಲುಗಳನ್ನು ತೂರಲಾಗುತ್ತದೆ ನಂತರ ಮೆರವಣಿಗೆಯಲ್ಲಿ ಗೊಂದಲ, ಗದ್ದಲ ಪ್ರಾರಂಭವಾದ ನಂತರ ಪೊಲೀಸಿನವರು ಮೆರವಣಿಗೆಯನ್ನ ಕೊಂಡೊಯ್ಯುತ್ತಿದ್ದ ಹಿಂದೂ ಕಾರ್ಯಕರ್ತರ ಮೇಲೆ ಗಣಪತಿ ಉತ್ಸವದ ಮುಖಂಡರ ಮೇಲೆ ಲಾಠಿ ಬೀಸಿ ಚದುರಿಸುತ್ತಾರೆ ನಂತರ ಗಣಪತಿಯನ್ನ ಪೋಲೀಸಿನವರ ಸುಪರ್ದಿಗೆ ತೆಗೆದುಕೊಂಡು ತಾವೇ ಗಣಪತಿಯನ್ನು ವಿಸರ್ಜಿಸುತ್ತಾರೆ. ಈ ಸುದ್ದಿ ಇಡೀ ಮದ್ದೂರು ಟೌನ್ ಕಾಡ್ತಿಚ್ಚಿನಂತೆ ಹಬ್ಬಿ ಜನ ರಸ್ತೆಗೆ, ಬೀದಿಗೆ ಇಳಿಯುತ್ತಾರೆ.
ಬೆಳಿಗ್ಗೆ ಸಾಮೂಹಿಕ ಗಣಪತಿ ವಿಸರ್ಜನೆ ಮಾಡಲು ಹಿಂದೂ ಸಂಘಟನೆಗಳು ಕರೆಕೊಟ್ಟ ನಂತರ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ರವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಾರೆ.
ಬಿಜೆಪಿಯವರ ಪಾತ್ರವಿದೆ, ಬಿಜೆಪಿಯವರ ಕುಮ್ಮಿಕ್ಕಿನಿಂದಲೇ ಈ ಗಲಭೆ ನಡೆದಿರುವುದು ಎಂದು ಚೆಲುವರಾಯಸ್ವಾಮಿ ರವರು ಹೇಳಿಕೆ ಕೊಟ್ಟ ನಂತರ ಹಿಂದೂ ಕಾರ್ಯಕರ್ತರು ಮಾರನೇ ದಿನ ಮದ್ದೂರ್ ಬಂದಿಗೆ ಕರೆ ಕೊಡುತ್ತಾರೆ ನಂತರ ಮಾರನೇ ದಿನ ಸಾಮೂಹಿಕ ಗಣಪತಿ ವಿಸರ್ಜನೆಗೆ ಕರೆಕೊಟ್ಟಾಗ ಜಿಲ್ಲೆಯಾದ್ಯಂತ ಯುವಕರು ರೊಚ್ಚಿಗೆದ್ದು ಬಂದ್ ಮತ್ತು ಸಾಮೂಹಿಕ ಗಣಪತಿ ವಿಸರ್ಜನೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಸಡ್ಡು.
ಶಕ್ತಿ ಪ್ರದರ್ಶನವನ್ನು ಸಹ ನೀಡಿರುತ್ತಾರೆ ಇದರಿಂದ ಎಚ್ಚೆತ್ತುಕೊಂಡ ಚೆಲುವರಾಯಸ್ವಾಮಿ ಮತ್ತು ಮುಸ್ಲಿಂ ಮುಖಂಡರು ಈ ಗಲಭೆ ನಡೆದಿರುವುದು ಮುಸ್ಲಿಂ ಯುವಕರಿಂದ, ನಮ್ಮಿಂದಲೇ ಗಲಭೆ ಪ್ರಾರಂಭವಾಗಿದೆ ತಪ್ಪಾಗಿದೆ ಎಂದು ಮಾರನೇ ದಿನ ಪತ್ರಿಕೆ ಹೇಳಿಕೆ ಕೊಟ್ಟಿರುತ್ತಾರೆ. ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯು ಹಿಂಸಾಚಾರಕ್ಕೆ ತಿರುಗಿದ ಕ್ಷಣದಿಂದಲೇ, ಶಾಂತಿ ನೆಲೆಸಿದ್ದ ಪಟ್ಟಣದ ಸ್ವರೂಪವೇ ಬದಲಾಗಿದೆ. ಮೂರೂವರೆ ದಶಕಗಳಿಂದ ಏನೂ ತೊಂದರೆ ಇಲ್ಲದೆ ನಡೆಯುತ್ತಿದ್ದ ಈ ಹಬ್ಬದ ಸಂಭ್ರಮವನ್ನು, ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ, ಗುಪ್ತಚರ (ಇಂಟೆಲಿಜೆನ್ಸ್) ವೈಫಲ್ಯ ಹಾಗೂ ಮತ ಬ್ಯಾಂಕ್ ರಾಜಕಾರಣವೇ ಗೊಂದಲಕ್ಕೆ ತಳ್ಳಿದೆ ಎಂದಿದೆ.
ಹೀಗಿದೆ ಮದ್ದೂರು ಗಣೇಶ ಗಲಾಟೆ ಕೇಸ್ ಸಂಬಂಧದ ಬಿಜೆಪಿ ಸತ್ಯಶೋಧನಾ ಸಮಿತಿ ರಿಪೋರ್ಟ್
ಬೆಂಗಳೂರಲ್ಲಿ ರಸ್ತೆ ಪಕ್ಕದಲ್ಲೇ ತ್ಯಾಜ್ಯ ಸುರಿಯಲು ಬಿಟ್ಟ ಅಧಿಕಾರಿಗಳಿಗೆ ಶಾಕ್: ಸ್ಥಳದಲ್ಲೇ ಸಿಎಂ ನೋಟಿಸ್
ಬೆಂಗಳೂರಲ್ಲಿ ಸರಿಯಾಗಿ ವೈಟ್ ಟಾಪಿಂಗ್ ಮಾಡದ ಗುತ್ತಿಗೆದಾರ, ಎಂಜಿನಿಯರ್ ವಿರುದ್ಧ ಕೇಸ್ ಹಾಕಿ: ಸಿಎಂ ಸೂಚನೆ