ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಭಾರತ ಮತ್ತು ಶ್ರೀಲಂಕಾ ನಡುವಿನ ಅಂತಿಮ ಸೂಪರ್ ಫೋರ್ ಪಂದ್ಯ ರೋಮಾಂಚಕವಾಗಿತ್ತು. ಪಂದ್ಯವು ಸೂಪರ್ ಓವರ್’ನಲ್ಲಿ ಕೊನೆಗೊಂಡಿದ್ದು, ಇದರಲ್ಲಿ ಟೀಮ್ ಇಂಡಿಯಾ ಗೆದ್ದಿತು. ಇದರೊಂದಿಗೆ, ಭಾರತ ತಂಡವು 2025ರ ಏಷ್ಯಾ ಕಪ್’ನಲ್ಲಿ ಆರು ವಿಕೆಟ್’ಗಳ ಜಯ ಸಾಧಿಸಿತು. ಈ ಪಂದ್ಯಾವಳಿಯಲ್ಲಿ ಅವ್ರು ಒಂದೇ ಒಂದು ಪಂದ್ಯವನ್ನ ಸೋತಿಲ್ಲ. ಭಾರತ ಈಗ ಫೈನಲ್’ನಲ್ಲಿ ಪಾಕಿಸ್ತಾನವನ್ನ ಎದುರಿಸಲಿದೆ. ಶ್ರೀಲಂಕಾ ವಿರುದ್ಧದ ಪಂದ್ಯದ ನಂತರ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಶ್ರೀಲಂಕಾದ ಯುವ ಆಲ್‌ರೌಂಡರ್’ನನ್ನು ಭೇಟಿಯಾಗಿ ಅಪ್ಪಿಕೊಂಡರು. ಶ್ರೀಲಂಕಾ ಆಟಗಾರನ ತಂದೆಯ ನಿಧನಕ್ಕೆ ಭಾರತೀಯ ನಾಯಕ ಸಂತಾಪ ಸೂಚಿಸಿದರು.
ಅಂತಿಮ ಸೂಪರ್ ಫೋರ್ ಪಂದ್ಯದಲ್ಲಿ ರೋಮಾಂಚಕ ಗೆಲುವಿನ ನಂತರ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಶ್ರೀಲಂಕಾದ ಆಲ್‌ರೌಂಡರ್ ಡುನಿತ್ ವೆಲ್ಲಲಗೆ ಅವರನ್ನ ಭೇಟಿಯಾಗಿ ಅಣ್ಣನಂತೆ ಅಪ್ಪಿಕೊಂಡು ಸಂತೈಸಿದರು. ಅಂದ್ಹಾಗೆ, ವೆಲ್ಲಲಗೆ ಅವರ ತಂದೆ ಸೆಪ್ಟೆಂಬರ್ 18ರಂದು ನಿಧನರಾಗಿದ್ದು, ಶ್ರೀಲಂಕಾದ ಆಲ್‌ರೌಂಡರ್ ಆ ದಿನ ಅಫ್ಘಾನಿಸ್ತಾನ ವಿರುದ್ಧ ಆಡುತ್ತಿದ್ದರು.
ವಿಡಿಯೋ ನೋಡಿ.!