ಬಾಗಲಕೋಟೆ : ನಿರಂತರ ಮಳೆಗೆ ಮನೆಯ ಮೇಲ್ಚಾವಣಿ ಗೋಡೆ ಕುಸಿದು ಬಾಲಕ ಸಾವನಪ್ಪಿದ್ದಾನೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದ್ದು, ದರ್ಶನ್ ಲಾತೂರ್ (11) ಎನ್ನುವ ಬಾಲಕ ಸಾವನಪ್ಪಿದ್ದು ಇನ್ನೊರ್ವ ಬಾಲಕ ಶ್ರೀಶೈಲ್ ಗೆ ಗಂಭೀರವಾದ ಗಾಯಗಳಾಗಿವೆ.
ಇಂದು ಬೆಳಗಿನ ಜಾವ ಐದು ಗಂಟೆಗೆ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಕುಸಿದು ಬಿದ್ದು ಈ ಒಂದು ದುರಂತ ಸಂಭವಿಸಿದೆ. ಮನೆಯ ಕೋಣೆಯಲ್ಲಿ ತಾಯಿಯೊಂದಿಗೆ ಇಬ್ಬರು ಮಕ್ಕಳು ಮಲಗಿದ್ದರು. ತಾಯಿ ಮತ್ತೊಂದು ಕೊಠಡಿಗೆ ಬರುತ್ತಿದ್ದಂತೆ ಮೇಲ್ಚಾವಣಿ ಗೋಡೆ ಕುಸಿದು ಬಾಲಕ ಸಾವನಪ್ಪಿದ್ದಾನೆ ಗಾಯಗೊಂಡ ಶ್ರೀಶೈಲ್ ಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.