Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಹಿರಿಯ ಗಾಯಕಿ `ಆಶಾ ಭೋಸ್ಲೆ’ ಇನ್ನಿಲ್ಲ | Asha Bhosle passes away

12/04/2026 12:54 PM

BREAKING : ಸ್ತಬ್ಧವಾಯಿತು ಮಧುರ ಕಂಠ : ಸಾವಿರಾರು ಗೀತೆಗಳಿಗೆ ಧ್ವನಿಯಾಗಿದ್ದ ಆಶಾ ಭೋಸ್ಲೆ ನಿಧನ | Asha Bhosle No More

12/04/2026 12:50 PM

BREAKING : ನಮ್ಮವರು ಚುನಾವಣೆಗೆ ನಿಲ್ಲಬೇಕು ಇಲ್ಲ ಅಂದ್ರೆ ತಲೆ ಮೇಲೆ ಮಲ ಹೊರಬೇಕಾಗುತ್ತೆ : ಹಿರಿಯ ನಟ ಅಶೋಕ್!

12/04/2026 12:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯ ಜಿಲ್ಲಾ ಕೋಳಿ ಉತ್ಪಾದಕ ರೈತರ ಸಹಕಾರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಆಯ್ಕೆ
KARNATAKA

ಮಂಡ್ಯ ಜಿಲ್ಲಾ ಕೋಳಿ ಉತ್ಪಾದಕ ರೈತರ ಸಹಕಾರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಆಯ್ಕೆ

By kannadanewsnow0926/09/2025 4:00 PM

ಮಂಡ್ಯ : ಕೆಎಂಎಫ್ ಸಂಸ್ಥೆಯು ಹಾಲಿನಿಂದ ತಯಾರಿಸುವ ಉಪ ಉತ್ಪನ್ನಗಳ ಮಾದರಿಯಲ್ಲೇ ಕೋಳಿ ಮಾಂಸದ ವಿವಿಧ ಭಾಗಗಳನ್ನು ಪ್ರತ್ಯೇಕಿಸಿ ರಿಟೇಲ್ ಮಳಿಗೆಗಳಲ್ಲಿ ಮಾರಾಟ ಮಾಡುವ ಮಹತ್ವದ ಯೋಜನೆಯನ್ನು ನಮ್ಮ ಒಕ್ಕೂಟವು ಈಗಾಗಲೇ ರೂಪುರೇಷೆ ತಯಾರಿಸಿದೆ ಎಂದು ಒಕ್ಕೂಟದ ನೂತನ ಅಧ್ಯಕ್ಷ ಎಂ.ಆರ್.ಬಾಲಕೃಷ್ಣ ಹೇಳಿದರು.

ಇಂದು ಮಂಡ್ಯದ ಮದ್ದೂರು ನಗರದ ಶಿವಪುರದ ಒಕ್ಕೂಟದ ಕಛೇರಿ ಆವರಣದಲ್ಲಿ ಮಂಡ್ಯ ಜಿಲ್ಲಾ ಕೋಳಿ ಉತ್ಪಾದಕ ರೈತರ ಸಹಕಾರ ಒಕ್ಕೂಟಕ್ಕೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಿತು. ಇಂದಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಆರ್.ಬಾಲಕೃಷ್ಣ, ಉಪಾಧ್ಯಕ್ಷರಾಗಿ ಡಿ.ಕೃಷ್ಣಪ್ಪ ಹಾಗೂ ನಿರ್ದೇಶಕರಾಗಿ ಕೆ.ಕೃಷ್ಣಯ್ಯ, ಗೋಪಾಲ, ಬೆಟ್ಟಸ್ವಾಮಿ, ಆತ್ಮಾನಂದ, ಎಂ.ವಿ.ವೆಂಕಟೇಶ್, ಜೋಗಿಗೌಡ, ಬಿ.ಗಿರೀಶ್, ಆರ್.ಸಿದ್ದಪ್ಪ, ಎಸ್.ಎಲ್. ಜಯಲಿಂಗೇಗೌಡ, ಸಿ.ಕೆಂಪರಾಜು, ಎಂ.ಸಿ.ಯೋಗೇಶ್, ಎಲ್.ಸಿ.ಪ್ರವೀಣ್ ಕುಮಾರ್, ಚುನಾಯಿತರಾದರು‌.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಬಾಲಕೃಷ್ಣ ಅವರು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮಂಡ್ಯ ಜಿಲ್ಲಾ ಕೋಳಿ ಉತ್ಪಾದಕ ರೈತರ ಸಹಕಾರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ಕೆಎಂಎಫ್ ಸಂಸ್ಥೆಯು ಹಾಲಿನಿಂದ ತಯಾರಿಸುವ ಉಪ ಉತ್ಪನ್ನಗಳ ಮಾದರಿಯಲ್ಲೇ ಕೋಳಿ ಮಾಂಸದ ವಿವಿಧ ಭಾಗಗಳನ್ನು ಮಾರಾಟ ಮಾಡುವ ಮಹತ್ವದ ಯೋಜನೆಯನ್ನು ನಮ್ಮ ಒಕ್ಕೂಟವು ಈಗಾಗಲೇ ರೂಪುರೇಷೆ ತಯಾರಿಸಿದೆ ಎಂದರು.

ಜಿಲ್ಲೆ ಮತ್ತು ನೆರೆ ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ರಿಟೇಲ್ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. ಕೋಳಿ ಮಾಂಸದ ವಿವಿಧ ಭಾಗಗಳನ್ನು ಪ್ರತ್ಯೆಕಿಸಿ 1 ಕೆಜಿ ಮೌಲ್ಯದ ಪ್ಯಾಕೇಟ್ ಗಳನ್ನು ಮಾಡಿದ ನಂತರ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು. ದೇವರ ಕಾರ್ಯ, ಬೀಗರ ಔತಣ ಕೂಟ, ಹುಟ್ಟುಹಬ್ಬ ಹಾಗೂ ವಿವಿಧ ಸಮಾರಂಭಗಳಿಗೆ ಗ್ರಾಹಕರು ಬಯಸಿದ ಮಾದರಿಯಲ್ಲೆ ಕೋಳಿಯ ವಿವಿಧ ಭಾಗಗಳನ್ನು ಪೂರೈಸಲಾಗುವುದಲ್ಲದೇ ಸರ್ಕಾರಿ ಸ್ವಾಮ್ಯದ ನವೋದಯ, ವಿಧ್ಯಾರ್ಥಿ ನಿಲಯಗಳು ಹಾಗೂ ಬಂಧಿಖಾನೆ ಸೇರಿದಂತೆ ಇನ್ನು ಹಲವು ನಿಲಯಗಳಿಗೆ ಬೇಡಿಕೆ ಆಧಾರದ ಮೇಲೆ ಸರಬರಾಜು ಮಾಡಲು ಒಕ್ಕೂಟವು ಆಧ್ಯತೆ ನೀಡುತ್ತದೆ.

ಗ್ರಾಹಕರಿಗೆ ಆನ್ ಲೈನ್ ಮೂಲಕ ಆರ್ಡರ್ ಪಡೆದು ಗುಣಮಟ್ಟದ ತಾಜಾ ಕೋಳಿ ಮಾಂಸದ ವಿವಿಧ ಭಾಗಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮೂಲ ಉದ್ದೇಶವಾಗಿದ್ದು, ಶೀಘ್ರದಲ್ಲೇ ಈ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಸ್ಪಷ್ಟಪಡಿಸಿದರು.

ಚುನಾವಣಾಧಿಕಾರಿಯಾಗಿ ಸಹಕಾರ ಸಂಘದ ಮಾರಾಟಾಧಿಕಾರಿ ಸಿ.ಎ.ಸುಧಾಕರ್ ಕರ್ತವ್ಯ ನಿರ್ವಹಿಸಿದರು.

ವರದಿ : ಗಿರೀಶ್ ರಾಜ್, ಮಂಡ್ಯ

ಜಾತಿಗಣತಿ ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಗಣತಿದಾರರ ವಿರುದ್ಧ ಕಾನೂನು ಕ್ರಮ: ಸಿಎಂ ಸಿದ್ಧರಾಮಯ್ಯ ಖಡಕ್ ಎಚ್ಚರಿಕೆ

ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಜಾರಿ: ರಾಜ್ಯಾಧ್ಯಕ್ಷ ಷಡಕ್ಷರಿಗೆ ಸಾಗರ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಧನ್ಯವಾದ

ನಾಳೆ ಶಿವಮೊಗ್ಗ ನಗರ, ಕುಂಸಿ, ಆಯನೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

Share. Facebook Twitter LinkedIn WhatsApp Email

Related Posts

BREAKING : ನಮ್ಮವರು ಚುನಾವಣೆಗೆ ನಿಲ್ಲಬೇಕು ಇಲ್ಲ ಅಂದ್ರೆ ತಲೆ ಮೇಲೆ ಮಲ ಹೊರಬೇಕಾಗುತ್ತೆ : ಹಿರಿಯ ನಟ ಅಶೋಕ್!

12/04/2026 12:48 PM1 Min Read

BREAKING : ಸಂವಿಧಾನ ಬದಲಾಯಿಸಲು ಹೊರಟವರ ಕೈ ಕತ್ತರಿಸಿ ಅಂತ ಹೇಳಬೇಕಾಗುತ್ತೆ : ಹಿರಿಯ ನಟ ಅಶೋಕ್ ಹೇಳಿಕೆ

12/04/2026 12:38 PM1 Min Read

BIG NEWS : ರೈತರಿಗೆ ವಂಚಿಸಿ ಅಸ್ತಿತ್ವವಿಲ್ಲದ ಕಂಪನಿಗೆ ಜಮೀನು ಹಸ್ತಾಂತರ: KIADB ಅಧಿಕಾರಿಗಳ ವಿರುದ್ಧ CBI ತನಿಖೆಗೆ ಹೈಕೋರ್ಟ್ ಆದೇಶ

12/04/2026 12:34 PM1 Min Read
Recent News

BREAKING : ಹಿರಿಯ ಗಾಯಕಿ `ಆಶಾ ಭೋಸ್ಲೆ’ ಇನ್ನಿಲ್ಲ | Asha Bhosle passes away

12/04/2026 12:54 PM

BREAKING : ಸ್ತಬ್ಧವಾಯಿತು ಮಧುರ ಕಂಠ : ಸಾವಿರಾರು ಗೀತೆಗಳಿಗೆ ಧ್ವನಿಯಾಗಿದ್ದ ಆಶಾ ಭೋಸ್ಲೆ ನಿಧನ | Asha Bhosle No More

12/04/2026 12:50 PM

BREAKING : ನಮ್ಮವರು ಚುನಾವಣೆಗೆ ನಿಲ್ಲಬೇಕು ಇಲ್ಲ ಅಂದ್ರೆ ತಲೆ ಮೇಲೆ ಮಲ ಹೊರಬೇಕಾಗುತ್ತೆ : ಹಿರಿಯ ನಟ ಅಶೋಕ್!

12/04/2026 12:48 PM

BREAKING : ಸಂವಿಧಾನ ಬದಲಾಯಿಸಲು ಹೊರಟವರ ಕೈ ಕತ್ತರಿಸಿ ಅಂತ ಹೇಳಬೇಕಾಗುತ್ತೆ : ಹಿರಿಯ ನಟ ಅಶೋಕ್ ಹೇಳಿಕೆ

12/04/2026 12:38 PM
State News
KARNATAKA

BREAKING : ನಮ್ಮವರು ಚುನಾವಣೆಗೆ ನಿಲ್ಲಬೇಕು ಇಲ್ಲ ಅಂದ್ರೆ ತಲೆ ಮೇಲೆ ಮಲ ಹೊರಬೇಕಾಗುತ್ತೆ : ಹಿರಿಯ ನಟ ಅಶೋಕ್!

By kannadanewsnow0512/04/2026 12:48 PM KARNATAKA 1 Min Read

ಕಲಬುರ್ಗಿ : ಸಂವಿಧಾನ ಬದಲಾಯಿಸಲು ಹೊರಟವರ ಕೈಗಳನ್ನು ಕತ್ತರಿಸಿ ಅಂತ ಹೇಳಬೇಕಾಗುತ್ತದೆ. ನಮ್ಮವರು ಚುನಾವಣೆಗೆ ನಿಲ್ಲಬೇಕು ಇಲ್ಲ ಅಂದ್ರೆ ತಲೆ…

BREAKING : ಸಂವಿಧಾನ ಬದಲಾಯಿಸಲು ಹೊರಟವರ ಕೈ ಕತ್ತರಿಸಿ ಅಂತ ಹೇಳಬೇಕಾಗುತ್ತೆ : ಹಿರಿಯ ನಟ ಅಶೋಕ್ ಹೇಳಿಕೆ

12/04/2026 12:38 PM

BIG NEWS : ರೈತರಿಗೆ ವಂಚಿಸಿ ಅಸ್ತಿತ್ವವಿಲ್ಲದ ಕಂಪನಿಗೆ ಜಮೀನು ಹಸ್ತಾಂತರ: KIADB ಅಧಿಕಾರಿಗಳ ವಿರುದ್ಧ CBI ತನಿಖೆಗೆ ಹೈಕೋರ್ಟ್ ಆದೇಶ

12/04/2026 12:34 PM

ರಾಜ್ಯದಲ್ಲಿ ಬಿಸಿಲಿಗೆ ಜನ ಹೈರಾಣ : ಕಲಬುರ್ಗಿಯಲ್ಲಿ ಗರಿಷ್ಠ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಸಾಧ್ಯತೆ!

12/04/2026 12:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.