ಬೆಂಗಳೂರು : ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಗಳ ಹಾವಳಿ ಇನ್ನು ನಿಂತಿಲ್ಲ. ಸಂಪೂರ್ಣವಾಗಿ ನಿಯಮ ಉಲ್ಲಂಘಿಸಿ 5 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈಗ ಬೆಂಗಳೂರಿನಲ್ಲಿ 5 ಅಂತಸ್ತಿನ ಕಟ್ಟಡ ಒಂದು ವಾಲಿದೆ. ಬೆಂಗಳೂರಿನ ಕೋರಮಂಗಲದ ವೆಂಕಟಾಪುರದಲ್ಲಿ ಈ ಒಂದು ಘಟನೆ ನಡೆದಿದೆ.
ಸುಮಾರು 750 ಚದರ ಅಡಿ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ನಿಯಮ ಗಾಳಿಗೆ ತೂರಿ ಐದು ಅಂತಸ್ತು ಕಟ್ಟಡ ನಿರ್ಮಾಣ ಮಾಡಲಾಗಿದೆ ಕೋರಮಂಗಲದ ವೆಂಕಟಪುರದಲ್ಲಿ ಇದೀಗ ಆತಂಕ ಸೃಷ್ಟಿಯಾಗಿದೆ. 15 ಎಂಟು ಐವತ್ತು ಅಡಿ ಅಥವಾ 750 ಚದರ ಅಡಿ ಜಾಗದಲ್ಲಿ 5 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ.
ನೆಲಮಹಡಿ ಸೇರಿದಂತೆ 5 ಮಹಡಿಯ ಕಟ್ಟದ ನಿರ್ಮಾಣ ಮಾಡಲಾಗಿದ್ದು ಕೋರಮಂಗಲ ಒಂದನೇ ಬ್ಲಾಕ್ ನಲ್ಲಿರುವ ವೆಂಕಟಪುರದಲ್ಲಿ ಈ ಒಂದು ಕಟ್ಟಡ ನಿರ್ಮಿಸಲಾಗಿದೆ. ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೆಂಕಟಪುರದಲ್ಲಿ ಅಪಾಯಕಾರಿ ಕಟ್ಟಡ ನಿರ್ಮಾಣ ಹಿನ್ನೆಲೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸದ್ಯ ಮಡಿವಾಳ ಠಾಣೆ ಪೊಲೀಸರು ಸ್ಥಳದಲ್ಲೇ ಇದ್ದಾರೆ.







