ಮಂಡ್ಯ: ಇಂದು ಸಂಜೆ ಕೆ ಆರ್ ಎಸ್ ನಲ್ಲಿ ಕಾವೇರಿ ಆರತಿಗೆ ಚಾಲನೆ ನೀಡಲಾಗುತ್ತದೆ. ವಿರೋಧದ ನಡುವೆಯೂ KRS ನಲ್ಲಿ ಕಾವೇರಿ ಆರತಿ ನಡೆಸಲಾಗುತ್ತಿದೆ. ಈ ಕಾವೇರಿ ಆರತಿ ವಿರೋಧಿಸಿ ರೈತರ ಪ್ರತಿಭಟನೆ ನಡೆಸಲಾಗುತ್ತಿದೆ. ಕಪ್ಪು ಪಟ್ಟಿ ಕಟ್ಟಿ ರೈತ ಸಂಘಟನೆಗಳಿಂದ KRS ಚಲೋ ನಡೆಸುತ್ತಿದ್ದಾರೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತರ ಪ್ರತಿಭಟನೆ ನಡೆಸಲಾಗುತ್ತಿದೆ. ಹೋರಾಟಕ್ಕೆ ಬಸ್ ನಲ್ಲಿ ಮಂಡ್ಯದಿಂದ KRS ಗೆ ನೂರಾರು ರೈತರು ತೆರಳಿದ್ದಾರೆ. ದಸರಾ ಅಂಗವಾಗಿ ಇಂದಿನಿಂದ KRSನಲ್ಲಿ ಕಾವೇರಿ ಆರತಿ ಆರಂಭಗೊಳ್ಳಲಿದೆ. ಇಂದಿನಿಂದ 5 ದಿನಗಳ ಕಾಲ ಸಾಂಕೇತಿಕವಾಗಿ ಕಾವೇರಿ ಆರತಿ ನಡೆಯಲಿದೆ.
ಕಾವೇರಿ ಆರತಿ ನಡೆಸುತ್ತಿರುವಂತ ರಾಜ್ಯ ಸರ್ಕಾರದ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಾವೇರಿ ಆರತಿ ಮಾಡದಂತೆ ರೈತರ ಎಚ್ಚರಿಕೆ ನೀಡಿದ್ದಾರೆ. ಕೋರ್ಟ್ ನಲ್ಲಿ ಮಧ್ಯಂತರ ಆದೇಶ ಇದ್ದರು ಕಾವೇರಿ ಆರತಿಗೆ ಹಠ ಬಿದ್ದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಲಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಈ ಯೋಜನೆ ನಿಲ್ಲಿಸಿ. ಕನ್ನಂಬಾಡಿ ಅಣೆಕಟ್ಟು ಉಳಿಸುವಂತೆ ಆಗ್ರಹಿಸಿದ್ದಾರೆ. ಮೌಢ್ಯ ಬಿತ್ತುವ ಬದಲು ಅಭಿವೃದ್ಧಿ ಕೆಲಸ ಮಾಡುವಂತೆ ಎಚ್ಚರಿಕೆಯನ್ನು, ಕಾನೂನು ಹೋರಾಟದ ಎಚ್ಚರಿಕೆ ರೈತರು ಕೊಟ್ಟಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
BREAKING: ಬೆಂಗಳೂರಲ್ಲಿ ಸೀರೆ ಕದ್ದ ಮಹಿಳೆ ಥಳಿಸಿದ್ದ ಅಂಗಡಿ ಮಾಲೀಕ ಉಮೇದ್ ರಾಮ್ ಅರೆಸ್ಟ್
ಜಾತಿಗಣತಿ ಸಮೀಕ್ಷೆ: ಹೀಗಿದೆ ಇಂದಿನ ಸಿಎಂ ಸಿದ್ಧರಾಮಯ್ಯ ವೀಡಿಯೋ ಕಾನ್ಫೆರೆನ್ಸ್ ಸಭೆಯ ಪ್ರಮುಖ ಹೈಲೈಟ್ಸ್