ಬೆಂಗಳೂರು : ರಾಜ್ಯದಲ್ಲಿ ಜಾತಿ ಗಣತಿ ನಡೆಸುತ್ತಿದ್ದು ಈ ವೇಳೆ ಸರ್ವರ್ ಸಮಸ್ಯೆ ಹಾಗೂ ಮೊಬೈಲ್ ನಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದರು. ಡಿಸಿಗಳು ಹಾಗು ಸಿಇಒಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದ್ದೇನೆ. ಸಮೀಕ್ಷೆಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು ವಿಡಿಯೋ ಸಂವಾದ್ದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಳೆದ ನಾಲ್ಕು ದಿನಗಳಿಂದ ಸರ್ವೆ ಕಾರ್ಯ ಕುಂಠಿತವಾಗಿತ್ತು. ಆದರೆ ಇಂದಿನಿಂದ ಸರ್ವೆ ಕೆಲಸ ಚುರುಕಾಗುತ್ತಿದೆ ಡಿಸಿಗಳು ಹೇಳುವ ಪ್ರಕಾರ 90% ತಾಂತ್ರಿಕ ಸಮಸ್ಯೆ ಪರಿಹಾರವಾಗಿದೆ. ಏನೇನು ತೊಡಕು ಇದ್ದಾವೆ ಅದನ್ನೆಲ್ಲ ನಿವಾರಿಸುವಂತೆ ಸೂಚಿಸಿದ್ದೇನೆ. ರಾಜ್ಯದಲ್ಲಿ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವಿಚಾರವಾಗಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ ಅವರಿಗೆ ಸಮೀಕ್ಷೆ ಕಾರ್ಯ ಮುಗಿಸಲು ತೀರ್ಮಾನಿಸಲಾಗಿದೆ ಎಂದುಳಿದ ವರ್ಗಗಳ ಆಯೋಗ ಕೂಡ ಅದೇ ತೀರ್ಮಾನ ಮಾಡಿತ್ತು ಆದರೆ ಕಳೆದ ನಾಲ್ಕು ದಿನಗಳಿಂದ ಸಮೀಕ್ಷೆ ಸರಿಯಾಗಿ ನಡೆದಿಲ್ಲ.
ಪ್ರತಿದಿನ ಶೇಕಡ 10ರಷ್ಟು ಸಮೀಕ್ಷೆ ಆಗಲೇಬೇಕು. ಕಳೆದ ನಾಲ್ಕು ದಿನದಿಂದ ಸರ್ವೆ ಕಾರ್ಯ ಕುಂಠಿತವಾಗಿತ್ತು ಆದರೆ ಇಂದಿನಿಂದ ಸರ್ವೆ ಕೆಲಸ ಚುರಕಾಗಿ ಇದೆ ಜಿಲ್ಲಾಧಿಕಾರಿಗಳು ಹೇಳುವ ಪ್ರಕಾರ 96 ತಾಂತ್ರಿಕ ಸಮಸ್ಯೆ ಪರಿಹಾರವಾಗಿದೆ ಉಳಿದಿರುವ ಸಮಸ್ಯೆ ಪರಿಹಾರ ಆಗುತ್ತದೆ ಇಂದೇ ಎಲ್ಲಾ ಸಮಸ್ಯೆ ಪರಿಹಾರ ಆಗುತ್ತದೆ ನಾನು ಕಮಿಷನರ್ ಅವರಿಗೂ ಹೇಳಿದ್ದೇನೆ ಕಾರ್ಯದರ್ಶಿಗು ಹೇಳಿದ್ದೇನೆ ಏನೇನು ಸಮಸ್ಯೆಗಳು ಇವೆಯೋ ಅದನ್ನೆಲ್ಲ ನಿವಾರಣೆ ಮಾಡಬೇಕು ಯಾರು ಕೂಡ ಸಂಶಯ ಪಟ್ಟುಕೊಳ್ಳುವ ಅಗತ್ಯ ಇಲ್ಲ ನಿಗದಿತ ಅವಧಿಯೊಳಗೆ ಸರ್ವೆ ಕೆಲಸ ಮುಗಿಯಬೇಕು. ಆನ್ಲೈನ್ ಅಲ್ಲೂ ಮಾಹಿತಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.