ಬೆಂಗಳೂರು : ಬೆಂಗಳೂರಿನ ಮಲ್ಲೇಶ್ವರಂ ನ ಫರ್ನಿಚರ್ ಶಾಪ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಸುಟ್ಟು ಭಸ್ಮವಾಗಿವೆ. ಮಲ್ಲೇಶ್ವರಂ ದತ್ತಾತ್ರೇಯ ದೇಗುಲದ ರಸ್ತೆಯಲ್ಲಿರುವ ಫರ್ನಿಚರ್ ಶಾಪ್ ನಲ್ಲಿ ಬೆಂಕಿ ಹತ್ತಿಕೊಂಡಿದೆ. ಪಕ್ಕದ ಅಪಾರ್ಟ್ಮೆಂಟ್ಗು ಕೂಡ ಬೆಂಕಿ ವ್ಯಾಪಿಸಿದೆ ತಕ್ಷಣ ಅಗ್ನಿಶಾಮಕದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕಾರ್ಯ ನಡೆಸಿದರು.
ಘಟನಾ ಸ್ಥಳಕ್ಕೆ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ,ರಾತ್ರಿ 3 ಗಂಟೆಗೆ ಈ ಒಂದು ಬೆಂಕಿ ಅವಗಡ ಸಂಭವಿಸಿದೆ. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಯಾವುದೇ ರೀತಿಯಾದ ಪ್ರಾಣ ಹಾನಿ ಆಗಿಲ್ಲ ಆದರೆ ಫರ್ನಿಚರ್ ಮಾಲೀಕರಿಗೆ ತುಂಬಾ ನಷ್ಟವಾಗಿದೆ. ಅಕ್ಕ ಪಕ್ಕದ ಮನೆಗಳಿಗೂ ಕೂಡ ಬೆಂಕಿ ವ್ಯಾಪಿಸಿದೆ. ಸ್ವಲ್ಪ ಮಟ್ಟಿಗೆ ಅಕ್ಕ ಪಕ್ಕದ ಮನೆಗಳಿಗೂ ಹಾನಿಯಾಗಿದೆ ಸದ್ಯಕ್ಕೆ ಯಾವುದೇ ರೀತಿ ಅನಾಹುತ ಆಗಲಿಲ್ಲ. ಈ ತರಹ ಅನಾಹುತ ಆದಾಗ ತಕ್ಷಣ ಸಾರ್ವಜನಿಕರು ಅಗ್ನಿಶಾಮಕ ಕಚೇರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.