ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ, ದಿನವೊಂದಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆ ಮಾಡುವ ವೇಳೆ ಹಲವು ಆಸ್ತಿ ಪಂಜರ ಪತ್ತೆಯಾಗಿದ್ದವು. ಈಗ ಈ ಒಂದು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಬಂಗ್ಲೆ ಗುಡ್ಡದಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ಮಾಡುವ ವೇಳೆ ಮಡಿಕೇರಿ ಮೂಲದ ವ್ಯಕ್ತಿ ಒಬ್ಬರ ಐಡಿ ಕಾರ್ಡ್ ಪತ್ತೆಯಾಗಿತ್ತು. ಇದೀಗ ಮತ್ತೊಂದು ಸಾಕ್ಷಿ ಸಿಕ್ಕಿದ್ದು, ಎಸ್ಐಟಿ ತನಿಖೆ ವೇಳೆ ಬಂಗ್ಲೇ ಗುಡ್ಡದಲ್ಲಿ ಡಿಎಲ್ ಸಿಕ್ಕಿತ್ತು. ಈ ಒಂದು ಡಿಎಲ್ ಆದಿಶೇಷ ನಾರಾಯಣ ಹೆಸರಿನ ಡ್ರೈವಿಂಗ್ ಲೈಸೆನ್ಸ್ ಪತ್ತೆಯಾಗಿದೆ. ಇವರು ತುಮಕೂರು ಮೂಲದವರು ಎಂದು ತಿಳಿದುಬಂದಿದೆ.
ತುಮಕೂರು ಮೂಲದ ಫ್ಯಾಮಿಲಿ ಗೆ ಇದೀಗ ಎಸ್ಐಟಿ ಬುಲಾವ್ ನೀಡಿದೆ. ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಕುಟುಂಬ ಆಗಮಿಸಿದೆ. ಆದಿಶೇಷ ನಾರಾಯಣನ ಸಹೋದರಿಯರು, ಬಾವ ಭೇಟಿ ನೀಡಿದ್ದಾರೆ. ಸಹೋದರ ಲಕ್ಷ್ಮಿ, ಪದ್ಮ ಹಾಗೂ ಬಾವ ಶಿವಕುಮಾರ್ ಆಗಮಿಸಿದ್ದಾರೆ. ಡಿಎಲ್ ಆದಿಶೇಷನದೆ ಎಂದು ಸಂಬಂಧಿಕರು ಪತ್ತೆಹಚ್ಚಿದ್ದಾರೆ. ಬಳಿಕ ಡಿಎನ್ಎ ಟೆಸ್ಟ್ ಮಾಡುವಾಗ ಮತ್ತೆ ಬರುವಂತೆ ಎಸ್ಐಟಿ ಅಧಿಕಾರಿಗಳು ಸೂಚಿಸಿದ್ದಾರೆ.
ತುಮಕೂರು ಜಿಲ್ಲೆಯ ದಾಸರಕಲ್ಲಹಳ್ಳಿ ನಿವಾಸಿಯಾಗಿರುವ ಆದಿಶೇಷ ದಾಸರಕಲ್ಲಹಳ್ಳಿಯ ಬೋಜಪ್ಪಾ ಮತ್ತು ಚೆನ್ನಮ್ಮ ದಂಪತಿಯ ಪುತ್ರ ಎಂದು ತಿಳಿದುಬಂದಿದೆ. ಆದಿಶೇಷ ದಂಪತಿಗೆ 3ನೇ ಮಗನಾಗಿದ್ದು ಬೆಂಗಳೂರಿನ ಬಾರ್ ಒಂದರಲ್ಲಿ ಆದಿಶೇಷ ನಾರಾಯಣ ಕೆಲಸ ಮಾಡುತ್ತಿದ್ದ.ಕಳೆದ 12 ವರ್ಷದ ಹಿಂದೆ ಆದಿಶೇಷ ನಾರಾಯಣ ಕಣ್ಮರೆಯಾಗಿದ್ದ. ಅಕ್ಟೋಬರ್ 2 / 2013 ರಂದು ಆದಿಶೇಷ ನಾರಾಯಣ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.