ಕಲಬುರ್ಗಿ : ರಾಜ್ಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಉಜಿನಿ ಮತ್ತು ಸೀನಾ ಡ್ಯಾಂನಿಂದ ಭೀಮಾ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಬಿಡುಗಡೆ ಮಾಡಿದ್ದರಿಂದ ನದಿಗೆ ಇದುವರೆಗೂ 3.20 ಲಕ್ಷ ನೀರು ಬಿಟ್ಟು ಹಿನ್ನೆಲೆಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಬುರ್ಗಿ ಜಿಲ್ಲೆಯ ಆಫ್ಜಲ್ಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿರುವ ಉತ್ತರಾದಿ ಮಠ ಸಂಪೂರ್ಣವಾಗಿ ಜಲಾವೃತವಾಗಿದೆ.
ಮಣ್ಣೂರು ಗ್ರಾಮದಲ್ಲಿನ ದೇಶತೀರ್ಥ ವಿದ್ಯಾಪೀಠ ಉತ್ತರಾದಿ ಮಠಕ್ಕೆ ನದಿ ನೀರು ನುಗ್ಗಿದೆ ಮಠದಲ್ಲಿನ ಸಂಸ್ಕೃತ ಪಾಠ ಶಾಲೆಯ 15 ವಿದ್ಯಾರ್ಥಿಗಳು ಹಾಗೂ ಗೋಶಾಲೆಯಲ್ಲಿದ್ದ ಗೋವುಗಳನ್ನು ತಕ್ಷಣ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಅತಿಯಾದ ಮಳೆಯಾದರೆ ಅಥವಾ ಅಭಿಮಾನದಿಗೆ ಹೆಚ್ಚಿನ ನೀರು ಬಿಟ್ಟರೆ ಗ್ರಾಮದಲ್ಲಿರುವ ಯಲ್ಲಮ್ಮ ದೇವಸ್ಥಾನ ಕೂಡ ಸಂಪೂರ್ಣವಾಗಿ ಜಲಾವೃತವಾಗುತ್ತದೆ.