ಧಾರವಾಡ : ಯೂಟ್ಯೂಬರ್ ಮುಕಳೆಪ್ಪಾ ವಿವಾಹ ವಿವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಕಳೆಪ್ಪ ವಿರುದ್ಧ ಯುವತಿ ಗಾಯತ್ರಿ ತಾಯಿ ಶಿವಕ್ಕ ಇದೀಗ ಅಕ್ರೋಶ ಹೊರ ಹಾಕಿದ್ದಾರೆ. ನನ್ನ ಮಗಳನ್ನು ಭೇಟಿ ಆದಾಗ ಅವಳ ಕೊರಳಲ್ಲಿ ತಾಳಿಯೆ ಇರಲಿಲ್ಲ. ಹಿಂದೂ ಧರ್ಮದಲ್ಲಿ ವಿವಾಹಿತೆಯರು ತಾಳಿ ಹಾಕಿಕೊಳ್ಳುತ್ತಾರೆ.
ನನ್ನ ಮಗಳಿಗೆ ತಾಳಿ ಎಲ್ಲಿದೆ ಅಂತ ಕೇಳಿದಾಗ ಮನೆಯಲ್ಲಿದೆ ಅಂತ ಹೇಳಿದಳು. ನಿಜವಾಗಲು ಮದ್ವೆ ಆಗಿದ್ರೆ ಗಾಯತ್ರಿ ತಾಳಿ ತೋರಿಸುತ್ತಿದ್ದಳು. ಮುಕಳೆಪ್ಪ ನನ್ನ ಮಗಳಿಗೆ ಮೋಸ ಮಾಡುತ್ತಿದ್ದಾನೆ. ಹಿಂದೂ ಆಗಿದ್ದರೆ ಆಕೆ ಹಣೆಗೆ ಕುಂಕುಮ ಏಕೆ ಹಚ್ಚುತ್ತಿಲ್ಲ? ಮೆಹಂದಿಯಲ್ಲಿ ನಿಮ್ಮ ಭಾಷೆಯಲ್ಲಿ ಹೇಗೆ ಬರೆಸಿಕೊಳ್ಳುತ್ತಿದ್ದಳು. ನಿನ್ನ ಭಾಷೆಯಲ್ಲಿ ನಿನ್ನ ಹೆಸರು ಹಾಕಿಕೊಂಡಿದ್ದಾಳೆ. ನನ್ನ ಮಗಳನ್ನು ಇಷ್ಟು ದಿನ ಹೆತ್ತು ಹೊತ್ತು ಸಾಕಿ ಬೆಳೆಸಿದ್ದೇವೆ.