ವಿಜಯಪುರ : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆಗೂ ಭಾರಿ ಮಳೆ ಸುರಿಯುತ್ತಿದ್ದು ವಿಜಯಪುರದಲ್ಲಿ ಘೋರ ಘಟನೆಯೊಂದು ನಡೆದಿದೆ ಭಾರಿ ಮಳೆಯಿಂದಾಗಿ ಸೇತುವೆಂದು ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಆದರೆ ಬೈಕ್ ಸವಾರ ನೊಬ್ಬ ಮುಳುಗಡೆಯಾಗಿದ್ದ ಸೇತುವೆ ದಾಟಲು ಹೋಗಿ ನೀರು ಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ನಡೆದಿದೆ.
ಹೌದು ಜಲಿಯಲಿ ಭಾರಿ ಮಳೆ ಸುರಿಯುತ್ತಿದ್ದು, ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ತಾಳಿಕೋಟಿ ಪಟ್ಟಣದಲ್ಲಿ ನದಿಗೆ ನಿರ್ಮಿಸಿದ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಮುಳುಗಡೆಯಾದ ಸೇತುವೆ ದಾಟಲು ಯತ್ನಿಸಿದ ಬೈಕ್ ಸವಾರನೊಬ್ಬ ಬೈಕ್ ಸಮೇತ ನೀರುಪಾಲಾಗಿದ್ದಾನೆ. ನೀರುಪಾಲಾದ ಯುವಕನನ್ನು ಸಂತೋಷ ಹಡಪದ (22) ಎಂದು ಗುರುತಿಸಲಾಗಿದೆ.
ಅದೃಷ್ಟವಶಾತ್ ಹಿಂಬದಿ ಸವಾರ ಅಪಾಯದಿಂದ ಪಾರಾಗಿದ್ದಾನೆ. ಮಹಾಂತೇಶ ಹೊಸಗೌಡ (20) ಅಪಾಯದಿಂದ ಪಾರಾದ ಯುವಕ. ಇಬ್ಬರೂ ವಡವಡಗಿಯಿಂದ ತಾಳಿಕೋಟಿ ಪಟ್ಟಣಕ್ಕೆ ಹೋಗುವ ಸಂದರ್ಭದಲ್ಲಿ ಘಟನೆ ನಡೆದಿದೆ. ಸೇತುವೆ ಮುಳುಗಡೆಯಾಗಿದ್ದರಿಂದ ತಾಳಿಕೋಟಿ ವಿಜಯಪುರ ರಸ್ತೆ ಸಂಪರ್ಕ ಕಡಿತವಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಯುವಕರು ಬೈಕ್‍ನಲ್ಲಿ ತೆರಳುವ ದುಸ್ಸಾಹಸ ಮಾಡಿದ್ದು ಈ ಅವಘಡಕ್ಕೆ ಕಾರಣವಾಗಿದೆ. ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.