ಬೆಂಗಳೂರು : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದ್ದು, ಕ್ರಿಕೆಟ್ ತರಬೇತುದಾರನ ವಿರುದ್ಧ ಸೆಕ್ಸ್ ಸ್ಕ್ಯಾಂಡಲ್ ಪ್ರಕರಣ ದಾಖಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ತರಬೇತುದಾರನ ವಿರುದ್ಧ FIR ದಾಖಲಾಗಿದೆ. ಕಾಮುಕ ಕೋಚ್ ನ ಮುಖ ಅನಾವರಣವಾಗಿದೆ. ಮದುವೆಯಾದ ಮಹಿಳೆಯರೇ ಕಾಮುಕ ಮ್ಯಾಥ್ಯೂನ ಟಾರ್ಗೆಟ್ ಆಗಿದ್ದಾರೆ.
ಕ್ಯಾಂಪ್ಗೆ ಬರುವ ಮಕ್ಕಳ ಪೋಷಕರನ್ನೇ ಆತ ಟಾರ್ಗೆಟ್ ಮಾಡಿ ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಬನ್ನೆರುಘಟ್ಟ ರಸ್ತೆಯ ಖಾಸಗಿ ಶಾಲೆಯಲ್ಲಿ ಮ್ಯಾಥ್ಯೂ ದೈಹಿಕ ಶಿಕ್ಷಣ ಆಗಿದ್ದಾನೆ. ಮೂಲತಹ ಕೇರಳ ಮೂಲದವನಾಗಿರುವ ಆರೋಪಿ ಮ್ಯಾಥ್ಯೂ ಹಲವರ ಜೊತೆ ನಗ್ನ ವಿಡಿಯೋ ಮಾಡಿಕೊಂಡಿದ್ದಾನೆ. ಮದುವೆಯಾಗಿ ವಿಚ್ಛೇದನ ಆಗಿದ್ದ ಸಂತ್ರಸ್ತ ಮಹಿಳೆಗೆ ಇದೀಗ ಆತ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದೆ.
ತನ್ನ ಮಗಳನ್ನು ಸಂತ್ರಸ್ತಮ್ಮೆ ಹೇಳಿ ಕ್ಯಾಂಪ್ಗೆ ಬಿಡಲು ಬರುತ್ತಿದ್ದಳು. ಈ ವೇಳೆ ಆಕೆಯನ್ನು ಮ್ಯಾಥ್ಯೂ ಪರಿಚಯ ಮಾಡಿಕೊಂಡು ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮದುವೆಯಾಗುತ್ತೇನೆ ಎಂದು ನಂಬಿಸಿ ಗರ್ಭಿಣಿ ಮಾಡಿ ಮ್ಯಾಥ್ಯೂ ಕೈ ಕೈಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ಯುವತಿಯರ ಜೊತೆಗೂ ಕೂಡ ಮ್ಯಾಥ್ಯೂ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ತನ್ನ ಮೊಬೈಲ್ ನಲ್ಲಿ ನಗ್ನ ವಿಡಿಯೋ ಫೋಟೋ ಮಾಡಿಕೊಂಡಿದ್ದಾನೆ. ಈ ವಿಡಿಯೋ ಮತ್ತು ಫೋಟೋಗಳನ್ನು ನೋಡಿ ಸಂತ್ರಸ್ತ ಮಹಿಳೆ ಶಾಕ್ ಆಗಿದ್ದಾಳೆ.
ಇನ್ನು ಇದೇ ವಿಚಾರವಾಗಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಮ್ಯಾಥ್ಯೂ ವಿಡಿಯೋ ಮೂಲಕ ಪ್ರತ್ಯಕ್ಷನಾಗಿದ್ದಾನೆ. ವಿಡಿಯೋ ಹೇಳಿಕೆ ರಿಲೀಸ್ ಮಾಡಿದ ಕೋಚ್ ಮಾತ್ತು ನಾನು ಯಾವುದೇ ಕಾರಣಕ್ಕೂ ಆಗೆ ಮೋಸ ಮಾಡಿಲ್ಲ. ನಮ್ಮ ತಂದೆಯ ಜಮೀನಿನ ವಿಚಾರಕ್ಕೆ ನಾನು ಬೇರೆ ಕಡೆಗೆ ಬಂದಿದ್ದೇನೆ. ನಾನು ಆಕೆಯ ಜೊತೆಗೆ ಜೀವನ ನಡೆಸಲು ಸಿದ್ಧನಾಗಿದ್ದೇನೆ ಯಾಕೆ ಈ ರೀತಿ ಆರೋಪ ಮಾಡುತ್ತಿದ್ದಾರೆ ನನಗೆ ಗೊತ್ತಿಲ್ಲ ಆದಷ್ಟು ಬೇಗ ಬಂದು ಇದಕ್ಕೆ ಉತ್ತರ ಕೊಡುತ್ತೇನೆ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾನೆ.