ಬೆಳಗಾವಿ : ಈಗಾಗಲೇ ನಿನ್ನೆಯಿಂದ ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು, ಸಮೀಕ್ಷೆಗೆ ಸರ್ಕಾರ ಈಗಾಗಲೇ ಸರ್ಕಾರಿ ಶಿಕ್ಷಕರನ್ನು ನೇಮಕ ಮಾಡಿದೆ ಆದರೆ ಬೆಳಗಾವಿಯಲ್ಲಿ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡಿದ್ದು, ಈಗಾಗಲೇ ತೀರಿಹೋಗಿರುವ ಶಿಕ್ಷಕರ ಹೆಸರನ್ನು ನೇಮಕ ಮಾಡಿ ಎಡವಟ್ಟು ಮಾಡಿದೆ.
ಹೌದು ಬೆಳಗಾವಿಯಲ್ಲಿ ಶಿಕ್ಷಣ ಇಲಾಖೆಯಿಂದ ಮಹಾ ಎಡವಟ್ಟು ಆಗಿದ್ದು, ಸತ್ತ ಶಿಕ್ಷಕರ ಹೆಸರನ್ನು ಗಣಿತಿ ಕಾರ್ಯಕ್ಕೆ ಆಯ್ಕೆ ಮಾಡಿದ್ದಾರೆ. ನಿವೃತ್ತಿ ಹೊಂದುತ್ತಿರುವ ಶಿಕ್ಷಕರು ಆಯ್ಕೆಯಾಗಿದ್ದು, 7 ತಿಂಗಳ ಗರ್ಭಿಣಿ, ವಿಶೇಷ ಚೇತನರನ್ನು ಕೂಡ ನೇಮಕ ಮಾಡಿದೆ. ಹಾಗಾಗಿ ಗೊಂದಲ ಸರಿ ಪಡಿಸುವಂತೆ ಶಿಕ್ಷಕರು ಇದೀಗ ಪ್ರತಿಭಟನೆ ನಡೆಸುತ್ತಿದ್ದಾರೆ. ಸಮಸ್ಯೆಗೆ ಸ್ಪಂದಿಸದಿದ್ದರೆ ಗಣತಿಗೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.