ಶಿವಮೊಗ್ಗ: ರಾಜ್ಯದ 2ನೇ ಅತಿದೊಡ್ಡ ದಸರಾ ಎಂದೇ ಖ್ಯಾತಿಯಾಗಿರುವಂತ ಶಿವಮೊಗ್ಗ ದಸರಾಕ್ಕೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಅವರು ಚಾಲನೆ ನೀಡಿದರು.
ಇಂದು ಶಿವಮೊಗ್ಗ ದಸರಾಕ್ಕೆ ಬೆಳ್ಳಿ ಮಂಟಪದಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಇಂದಿನಿಂದ ಅಕ್ಟೋಬರ್.4ರವರೆಗೆ ಶಿವಮೊಗ್ಗದಲ್ಲಿ ನವರಾತ್ರಿ ಉತ್ಸವ ದೇವಾಲಯದಲ್ಲಿ ಸಂಭ್ರಮದಿಂದ ನಡೆಯಲಿದೆ.
ಶಿವಮೊಗ್ಗ ಪಾಲಿಕೆಯಿಂದ 650 ಕೆಜಿ ತೂಕದ ಬೆಳ್ಳಿ ಅಂಬಾರಿಯನ್ನು ಲಾರಿಯ ಮೇಲೆ ಮೆರವಣಿಗೆ ಮಾಡಿ ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಕೊಂಡೊಯ್ಯಲಾಯಿತು.
ಅಂದಹಾಗೇ ಶಿವಮೊಗ್ಗ ದಸರಾ ಉದ್ಘಾಟಿಸಿದಂತ ಬಿಎಸ್ ರಾಜು ಅವರು, ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ, ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನು ಪಡೆದಿದ್ದಂತ ನಿವೃತ್ತ ಯೋಧರಾಗಿದ್ದಾರೆ.
ಇನ್ಪೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಗೂ ಸೈಬರ್ ವಂಚನೆಗೆ ಯತ್ನ, ದೂರು ದಾಖಲು
Watch Video : ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಹೊಸ ‘AI’ ಅಸ್ತ್ರ ; ಮತ್ತೊಂದು ವಿಡಿಯೋ ಬಿಡುಗಡೆ