ಬೆಂಗಳೂರು : ಇತ್ತೀಚಿಗೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಎಸ್ ಬಿ ಐ ಬ್ಯಾಂಕ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಗಳನ್ನು ರೂಂನಲ್ಲಿ ಕೂಡಿಹಾಕಿ ಕೋಟ್ಯಾಂತರ ರೂಪಾಯಿ ನಗದು, 20 ಕೆಜಿ ಚಿನ್ನ ದರೋಡೆ ಪ್ರಕರಣ ಭಾರಿ ಸದ್ದು ಮಾಡಿತ್ತು. ಇದೀಗ ಬೆಂಗಳೂರಿನಲ್ಲಿ ಸಹ ಮನೆಯೊಂದರಲ್ಲಿ ಇದ್ದಂತಹ ಒಂದೂವರೆ ಕೋಟಿ ರೂಪಾಯಿಯನ್ನು ದರೋಡೆ ಮಾಡಿರುವ ಘಟನೆ ವರದಿಯಾಗಿದೆ.
ಹೌದು ಬೆಂಗಳೂರಿನಲ್ಲಿ ಒಂದೂವರೆ ಕೋಟಿ ರೂಪಾಯಿ ದರೋಡೆ ಮಾಡಲಾಗಿದ್ದು ಯಲಹಂಕದಲ್ಲಿ ಮನೆಗೆ ನುಗ್ಗಿ ಒಂದೂವರೆ ಕೋಟಿ ಲೂಟಿ ಮಾಡಿದ್ದಾರೆ. ಗಿರಿರಾಜು ಎಂಬುವವರ ಮನೆಗೆ ಬಂದ ನಾಲ್ವರು ಖದೀಮರು ಇನ್ನೋವಾ ಕಾರಿನಲ್ಲಿ ಬಂದು ಒಂದುವರೆ ಕೋಟಿ ರೂಪಾಯಿ ಕದ್ದು ಪರಾರಿಯಾಗಿದ್ದಾರೆ. ಸರ್ಕಾರಿ ಅಧಿಕಾರಿಗಳು ಎಂದು ಹೇಳಿ ಒಂದುವರೆ ಕೋಟಿ ರೂಪಾಯಿ ರಾಬರಿ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಕುರಿತು ದೂರು ನೀಡಿದ್ದಾರೆ.
ಜಮೀನು ಖರೀದಿಗೆ ಗಿರಿರಾಜು ಹಣ ತಂದುಕೊಂಡು ಇಟ್ಟಿದ್ದರು. ನಾಲ್ವರು ಮನೆಗೆ ಬರುತ್ತಿದ್ದ ಮನೆಯವರಿಗೆ ಪ್ರಶ್ನೆ ಮಾಡಿದ್ದಾರೆ ನಿಮ್ಮ ಮನೆಯಲ್ಲಿ ಹಣ ಎಲ್ಲಿದೆ ಎಂದು ನಾಲ್ವರು ಪ್ರಶ್ನಿಸಿದ್ದಾರೆ. ಅಡುಗೆ ಮನೆಯಲ್ಲಿ ಹಣದ ಬ್ಯಾಗ್ ಇರುವ ಬಗ್ಗೆ ಕುಟುಂಬಸ್ಥರೇ ಅವರಿಗೆ ನೀಡಿದ್ದಾರೆ. ನಂತರ ಮನೆ ಮಾಲೀಕ ಗಿರಿರಾಜು ಎಲ್ಲಿದ್ದಾರೆ ಅಂತ ಕೇಳಿದ್ದಾರೆ. ಗಿರಿರಾಜು ಮನೆಯಲ್ಲಿ ಇಲ್ಲ ಅಂತ ಮನೆಯವರು ಹೇಳಿದ್ದಾರೆ. ಗಿರಿರಾಜು ಇಲ್ಲ ಎಂದಾಗ ಹಣದೊಂದಿಗೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಒಂದುವರೆ ಕೋಟಿ ಜೊತೆಗೆ 50 ಗ್ರಾಂ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ. ಸದ್ಯ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.