ಬೆಂಗಳೂರು: ನಗರದಲ್ಲಿ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಂತ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ರೇಖಾ(35) ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಸುಂಕದಕಟ್ಟೆ ಬಳಿ ಲೋಕೇಶ್ ನಿಂದ ಚಾಕು ಇರಿತಕ್ಕೆ ರೇಖಾ ಒಳಗಾಗಿದ್ದರು. ತುಮಕೂರು ಜಿಲ್ಲೆಯ ಶಿರಾ ಮೂಲದ ರೇಖಾಗೆ ಚಾಕುವಿನಿಂದ ಲೋಕೇಶ್ ಇರಿದಿದ್ದರು.
ಲೋಕೇಶ್ ಆಲಿಯಾಸ್ ಲೋಹಿತಾಶ್ವ ಎಂಬಾತನಿಂದ ಈ ಕೃತ್ಯ ಎಸಗಲಾಗಿತ್ತು. ರೇಖಾಗೆ 11 ಬಾರಿ ಆರೋಪಿ ಲೋಕೇಶ್ ಚಾಕುವಿನಿಂದ ಇರಿದಿದ್ದರು. ಆಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೇ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಲೋಕೇಶ್ ಪತ್ತೆಗೆ ಕಾಮಾಕ್ಷಿಪಾಳ್ಯ ಪೊಲೀಸರು ಬಲೆ ಬೀಸಿದ್ದಾರೆ.
ಶಿವಮೊಗ್ಗ: ಜಾತಿ ಕಾಲಂನಲ್ಲಿ ‘ವೀರಶೈವ ಲಿಂಗಾಯಿತ’ವೆಂದು ನಮೂದಿಸಿ- ಟಿ.ಡಿ ಮೇಘರಾಜ್ ಮನವಿ
BREAKING: ನಾಳೆ ಮಧ್ಯಾಹ್ನಕ್ಕೆ ಜಾತಿಗಣತಿ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ ಹೈಕೋರ್ಟ್ ಮುಂದೂಡಿಕೆ