ಬೆಂಗಳೂರು : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಈವರೆಗೆ 1 ಲಕ್ಷ ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ದಸರಾ ಮಹೋತ್ಸವದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 500 ಕೋಟಿಗೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ್ದಾರೆ. ಈ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ.ಇದನ್ನು ವಿರೋಧ ಮಾಡಿದವರು ಇದನ್ನು ಒಪ್ಪಿಕೊಂಡಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು ಹೀಗಿದೆ
ಬಾನು ಮುಷ್ತಾಕ್ ಅವರು ಹುಟ್ಟಿನಿಂದ ಮುಸ್ಲಿಂ ಮಹಿಳೆ ಆಗಿರಬಹುದು ಆದರೆ ಅವರು ಕೂಡ ಮನುಷ್ಯರೇ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೆ ಹೊರತು, ಧರ್ಮದ ಆಧಾರದ ಮೇಲೆ ಜಾತಿಯ ಆಧಾರದ ಮೇಲೆ ದ್ವೇಷಿಸಬಾರದು ನಾವೆಲ್ಲರೂ ಮನುಷರು ನಾವೆಲ್ಲ ಪರಸ್ಪರ ಪ್ರೀತಿಯಿಂದ ಇರಬೇಕೆ ಹೊರತು ದ್ವೇಷದಿಂದ ಇರಬಾರದು ಅದು ಮನುಷ್ಯತ್ವದ ಲಕ್ಷಣ ಅಲ್ಲ. ಲ್ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಾವು ಮನುಷ್ಯತ್ವ ಒಪ್ಪಿಕೊಳ್ಳುವುದಾದರೆ ಈ ನಾಡಿನ ಯಾವುದೇ ಧರ್ಮ ಯಾವುದೇ ಜಾತಿ ಯಾವುದೇ ವರ್ಗಕ್ಕೆ ಸೇರಿರತಕ್ಕಂತಹವರು ಕೂಡ ಇಂತಹ ಪ್ರಮುಖವಾದಂತಹ ನಾಡ ಹಬ್ಬಗಳ ಉದ್ಘಾಟನೆಯನ್ನು ಮಾಡುವುದನ್ನು ಸ್ವಾಗತ ಮಾಡಬೇಕು ಈ ನಾಡಿನ ಬಹುಸಂಖ್ಯಾತ ಜನರು ಭಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದನ್ನು ಒಪ್ಪಿಕೊಂಡಿದ್ದಾರೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳುತ್ತಿದ್ದರು ಯಾರಿಗೆ ಇತಿಹಾಸ ಗೊತ್ತಿರಲ್ಲ, ಅವರ್ಯಾರು ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲ ಅಂತ ಹೇಳುತ್ತಿದ್ದರು ಹಾಗಾಗಿ ಪ್ರತಿಯೊಬ್ಬರೂ ಇತಿಹಾಸವನ್ನು ತಿಳಿದುಕೊಳ್ಳಬೇಕು. ಅದಕ್ಕೋಸ್ಕರನೇ ಸಂವಿಧಾನ ತಿಳಿದುಕೊಳ್ಳಲಿ ಎನ್ನುವ ಕಾರಣದಿಂದ ನಾನು ಎಚ್ ಸಿ ಮಹದೇವಪ್ಪ ಮಾತನಾಡಿಕೊಂಡು ಶಾಲಾ-ಕಾಲೇಜುಗಳಲ್ಲಿ ಕೂಡ ಸಂವಿಧಾನದ ಪೀಠಿಕೆಯನ್ನು ಓದಬೇಕು ನಿಮ್ಮ ಹಕ್ಕುಗಳು ಗೊತ್ತಿದ್ದರೆ ತಾನೇ ಅವುಗಳನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯ ಅಂತ ಸಂವಿಧಾನದ ಕಾರ್ಯಕ್ರಮ ಜಾರಿಗೆ ತಂದೇವು.
ಇತಿಹಾಸವನ್ನು ತಿರುಚಿ ಸ್ವರ್ಧಕ್ಕೋಸ್ಕರ ರಾಜಕೀಯಕ್ಕೋಸ್ಕರ ಮಾಡತಕ್ಕಂತದ್ದು ಅದು ಅಕ್ಷಮ್ಯ ಅಪರಾಧ. ರಾಜಕೀಯಕ್ಕಾಗಿ ಇತಿಹಾಸ ಬಳಸಬಾರದು ರಾಜಕೀಯ ಮಾಡುವುದಾದರೆ ತುಂಬಾ ಇದೆ. ರಾಜಕೀಯ ಮಾಡಲೇಬೇಕು ಎಂದಾದರೆ ಮಾಡೋಣ ಗೋಡ ಹೇ ಮೈದಾನ ಹೈ ಅಲ್ಲಿ ರಾಜಕೀಯ ಮಾಡೋಣ. ಅವಳಿಗೆ ರಾಜಕಾರಣ ಮಾಡಬಾರದು ಹೊಳೆಗೆ ರಾಜಕಾರಣದಿಂದ ಲಾಭಕ್ಕಿಂತ ನಷ್ಟಾನೆ ಜಾಸ್ತಿ ಆಗುತ್ತದೆ. ಹಾಗಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಒಪ್ಪಿಕೊಂಡಿದೆ.
ಜಾತ್ಯತೀತ ಧರ್ಮತೀತ ಇದನೆಲ್ಲ ಅರ್ಥ ಮಾಡಿಕೊಳ್ಳಬೇಕು ನಮ್ಮ ದೇಶದಲ್ಲಿ ಅನೇಕ ಜಾತಿಗಳಿವೆ, ಧರ್ಮಗಳಿವೆ ಅದಕ್ಕೋಸ್ಕರನೇ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಬೇಕು. ನಾವು ಯಾವುದೇ ಧರ್ಮಕ್ಕೆ ಸೇರಿರಲಿ ಯಾವುದೇ ಜಾತಿಗೆ ಸೇರಿರಲಿ ನಾವು ಎಲ್ಲರೂ ಕೂಡ ಭಾರತೀಯರು ಎನ್ನುವ ಭಾವನೆ ಬಂದಾಗ ಮಾತ್ರ ಅದನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ ಇಲ್ಲವಾದರೆ ಸಂವಿಧಾನ ಅರ್ಥವಾಗದೆ ಹೋದರೆ ಸಂವಿಧಾನಕ್ಕೆ ವಿರುದ್ಧವಾದ ಮಾತ್ರ ಸಂವಿಧಾನ ಅರ್ಥ ಆಗಿಲ್ಲ ಅಂತ ಹೇಳುತ್ತಾರೆ ಸಂವಿಧಾನವನ್ನ ತಿರುಚಿ ಹೇಳುವವರು ಸ್ವಾರ್ಥಿಗಳು ಸಂವಿಧಾನಕ್ಕೆ ಮಾಡುವ ಅಪಚಾರ ನಮ್ಮ ನಾಡಿಗೆ ದೇಶಕ್ಕೆ ಮಾಡುವ ಅಪಚಾರವಾಗಿದೆ ಎಂದರು.