ನವದೆಹಲಿ: ನಾಳೆ ಮಹತ್ವದ ಹೆಜ್ಜೆ ಇಡಲಿದ್ದೇವೆ. ನಾಳೆ ನವರಾತ್ರಿಯ ಮೊದಲ ದಿನವೇ ಆತ್ಮನಿರ್ಭಾರ ಭಾರತದತ್ತ ದೇಶ ದಾಪುಗಾಲಿಡಲಿದೆ. ನಾಳೆಯ ನವರಾತ್ರಿ ಮೊದಲ ದಿನದಿಂದ ಜಿಎಸ್ ಟಿ ಉತ್ಸವ ಆರಂಭವಾಗಲಿದೆ ಎಂಬುದಾಗಿ ಪ್ರಧಾ ನರೇಂದ್ರ ಮೋದಿ ತಿಳಿಸಿದ್ದಾರೆ.
ಇಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿರುವಂತ ಅವರು, ಜಿಎಸ್ಟಿಯಿಂದ ನಿಮ್ಮಲೆಲ್ಲರ ಉಳಿತಾಯ ಶುರುವಾಗಲಿದೆ. ಎಲ್ಲಾ ವರ್ಗದ ಜನರಿಗೂ ಉಳಿತಾಯದ ಉತ್ಸವ ಆರಂಭವಾಗಲಿದೆ. ನಿಮ್ಮ ನೆಚ್ಚಿನ ವಸ್ತುಗಳನ್ನು ಖರೀದಿ ಮಾಡಲು ಸಹಾಯವಾಗಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಜಿಎಸ್‌ಟಿ ಬಚತ್ ಉತ್ಸವ ನಾಳೆಯಿಂದ ಜಾರಿಗೆ ಬರಲಿದ್ದು, ಇದು ಜನರ ಉಳಿತಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ನವರಾತ್ರಿಯ ಮೊದಲ ದಿನದಿಂದ ದೇಶವು ಆತ್ಮನಿರ್ಭರ ಭಾರತದತ್ತ ಮತ್ತೊಂದು ಪ್ರಮುಖ ಹೆಜ್ಜೆ ಇಡುತ್ತಿದೆ. ನಾಳೆಯಿಂದ ಸೂರ್ಯೋದಯದೊಂದಿಗೆ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತರಲಾಗುವುದು. ‘ಜಿಎಸ್‌ಟಿ ಬಚತ್ ಉತ್ಸವ’ ಕೂಡ ಪ್ರಾರಂಭವಾಗಲಿದೆ. ಇದು ನಿಮ್ಮ ಉಳಿತಾಯವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.