ದಕ್ಷಿಣಕನ್ನಡ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಚಿನ್ನಯ್ಯ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿರುವ 5ನೇ ವಿಡಿಯೋ ರಿಲೀಸ್ ಆಗಿದ್ದು 2023 ಆಗಸ್ಟ್ ನಲ್ಲಿ ಈ ಒಂದು ವಿಡಿಯೋಗಳನ್ನು ರೆಕಾರ್ಡ್ ಮಾಡಿಟ್ಟುಕೊಳ್ಳಲಾಗಿತ್ತು. ಇದೀಗ ಆರೋಪಿಗಳು ಒಂದೊಂದಾಗಿ ವಿಡಿಯೋ ಬಿಡುತ್ತಿದ್ದಾರೆ. ತಿಮರೋಡಿ ಜೊತೆಗೆ ಮಾತನಾಡುವಾಗ ಚಿನ್ನಯ್ಯ ಸೌಜನ್ಯ ಕೊಲೆ ಪ್ರಕರಣದ ಕುರಿತು ಮಾತನಾಡಿದ್ದಾನೆ
ಹೌದು ತಿಮರೊಡಿ ಮುಂದೆ ಸೌಜನ್ಯ ಕೇಸ್ ಬಗ್ಗೆ ಪ್ರಸ್ತಾಪಿಸಲಾಗಿದೆ. ಆರೋಪಿ ಚಿನ್ನಯ ತಿಮ್ಮರೋಡಿ ಮುಂದೆ ಸೌಜನ್ಯ ಪ್ರಕರಣದ ಕುರಿತು ಪ್ರಸ್ತಪಿಸಿದ್ದಾನೆ. ಸೌಜನ್ಯ ಕಿಡ್ನಾಪ್ ಕೇಸ್ನಲ್ಲಿ ರವಿ ಪೂಜಾರಿ ಭಾಗಿಯಾಗಿದ್ದಾನೆ. ಕೊಲೆ ಮಾಡಿದವರಿಗೆ ಊಟ ಮತ್ತು ತಿಂಡಿ ಕೊಟ್ಟಿದ್ದಾನೆ ಕೊಲೆ ಮಾಡಿದವರಿಗೆ ರವಿ ಪೂಜಾರಿ ಸಹಾಯ ಮಾಡಿದ್ದಾನೆ. ರವಿ ಪೂಜಾರಿ ನಂತರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.ಸಹಾಯ ಮಾಡಿದ ರವಿ ಪೂಜಾರಿ ಇದೀಗ ಇಲ್ಲ ಎಂದು ಆರೋಪಿ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ.
ರವಿ ಪೂಜಾರಿ ಮತ್ತು ಗೋಪಾಲಕೃಷ್ಣ ಒಂದೇ ರೂಮ್ನಲ್ಲಿದ್ದರು. ಧರ್ಮಸ್ಥಳದಲ್ಲಿ ಇಬ್ಬರು ಒಟ್ಟಿಗೆ ರೂಮ್ನಲ್ಲಿ ಇದ್ದರು ಇಬ್ಬರು ಬಾಹುಬಲಿ ಬೆಟ್ಟದಲ್ಲಿ ಡ್ಯೂಟಿಯಲ್ಲಿ ಇದ್ದರು ನಾನು ರೂಂ ಬಾಯ್ ಗಳ ಜೊತೆಗೆ ಸೇರಿಕೊಳ್ಳುತ್ತಿದ್ದೆ ನೇತ್ರಾವತಿ ನದಿಯಲ್ಲಿ ಹಣಗಳನ್ನು ಬಿಸಾಕುತ್ತಿದ್ದರು ನಾವು ಅಲ್ಲಿ ಚಿನ್ನವನ್ನೆಲ್ಲ ಕಲೆಕ್ಟ್ ಮಾಡಿಕೊಳ್ಳುತ್ತಿದ್ದೇವೆ ಗೋಪಾಲಕೃಷ್ಣನಿಗೆ ಏನು ಆಯಿತು ಅಂತಾನೆ ಗೊತ್ತಿಲ್ಲ ಎಂದು ವಿಡಿಯೋದಲ್ಲಿ ಚಿನ್ನಯ ವಿವರಿಸಿದ್ದಾನೆ.