ಬೆಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ಬಹು ನಿರೀಕ್ಷಿತ ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಾಪ್ಟರ್-1 ಬಿಡುಗಡೆಯಾಗಲಿದೆ. ಈಗಾಗಲೇ ಟ್ರೈಲರ್ ಹೊರಬರಲು ಮುಹೂರ್ತ ಫಿಕ್ಸ್ ಆಗಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್ ಪ್ಲ್ಯಾನ್ ನಡೀತಿದೆ.
ಹೌದು ಇಡೀ ಭಾರತೀಯ ಚಿತ್ರರಂಗವೇ ‘ಕಾಂತಾರ’ ಹೊಸ ಅಧ್ಯಾಯ ಸಂಭ್ರಮಿಸಲಿದೆ. ಅದಕ್ಕಾಗಿ ಸ್ಟಾರ್ ನಟರು ಹೊಂಬಾಳೆ ಜೊತೆ ಕೈ ಜೋಡಿಸುತ್ತಿದ್ದಾರೆ. ಈ ಬಗ್ಗೆ ಕಾಂತಾರಾ ಚಾಪ್ಟರ್-1 ಟ್ರೈಲರ್ ಲಾಂಚ್ಗೆ ದಿನಾಂಕ, ಸಮಯ ನಿಗದಿಪಡಿಸಿರುವ ಬಗ್ಗೆ ಹೊಂಬಾಳೆ ಫಿಲ್ಮ್ಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಧಿಕೃತ ಮಾಹಿತಿ ಪ್ರಕಟಿಸಿದೆ.
ಸೆಪ್ಟೆಂಬರ್ 22ರ ಸೋಮವಾರ ಮಧ್ಯಾಹ್ನ 12:45 ಗಂಟೆಗೆ ‘ಕಾಂತಾರ ಚಾಪ್ಟರ್-1’ ಸಿನಿಮಾ ಟ್ರೈಲರ್ ಬಿಡುಗಡೆ ಆಗಲಿದೆ. ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ದೊಡ್ಡ ಈವೆಂಟ್ ಮಾಡಿ ಟ್ರೈಲರ್ ರಿಲೀಸ್ ಮಾಡುವ ಸಾಧ್ಯತೆಯಿದೆ. ಇನ್ನು ಹೃತಿಕ್ ರೋಷನ್ ಹಿಂದಿ ವರ್ಷನ್ ಟ್ರೈಲರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಿದ್ದಾರೆ. ಅದೇ ರೀತಿ, ತೆಲುಗಿಗೆ ಪ್ರಭಾಸ್, ಮಲಯಾಳಂಗೆ ಪೃಥ್ವಿರಾಜ್ ಸುಕುಮಾರನ್, ತಮಿಳಿಗೆ ಶಿವಕಾರ್ತಿಕೇಯನ್ ಪ್ರಚಾರಕ್ಕೆ ಸಾಥ್ ನೀಡಿದ್ದಾರೆ.