ಇಂದು ಈ ವರ್ಷದ ಕೊನೆಯ ಸೂರ್ಯ ಗ್ರಹಣ ಗೋಚರಸುತ್ತಿದ್ದೂ, ಮಹಾಲಯ ಅಮಾವಾಸ್ಯೆಯ ದಿನದಂದೇ ಖಂಡಗ್ರಾಸ ಸೂರ್ಯ ಗ್ರಹಣ ಗೋಚರಿಸಲಿದೆ. ಹಾಗಾಗಿ ಇಂದು ಖಗೋಳದಲ್ಲಿ ಮತ್ತೊಂದು ವಿಸ್ಮಯ ನಡೆಯಲಿದೆ. ಕಳೆದ ಕೆಲವು ದಿನಗಳ ಹಿಂದೆ ಅಷ್ಟೆ ಚಂದ್ರ ಗ್ರಹಣ ಗೋಚರವಾಗಿತ್ತು.
15 ದಿನಗಳ ಅಂತರದಲ್ಲಿ ಸೂರ್ಯ ಚಂದ್ರ ಗ್ರಹಣಕ್ಕೆ ಇಂದು ಖಗೋಳ ಸಾಕ್ಷಿಯಾಗುತ್ತಿದೆ ಇಂದು ರಾತ್ರಿ 11 ರಿಂದ ನಾಳೆ ಬೆಳಗಿನ ಜಾವ 3.34 ರವರೆಗೆ ಸೂರ್ಯ ಗ್ರಹಣ ಗೋಚರಿಸಲಿದೆ. ಆದರೆ ಭಾರತದಲ್ಲಿ ಸೂರ್ಯಗ್ರಹಣ ಗೋಚರವಿಲ್ಲ. ನ್ಯೂಜಿಲ್ಯಾಂಡ್, ಅಂಟಾರ್ಟಿಕಾ, ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಸೂರ್ಯ ಗ್ರಹಣ ಗೋಚರಿಸಲಿದೆ.
ಸೂರ್ಯ ಗ್ರಹಣವು ಬಹಳ ಅಪರೂಪದ ಖಗೋಳ ಘಟನೆಯಾಗಿದೆ. ಸೂರ್ಯ ಗ್ರಹಣದಲ್ಲಿ ಭೂಮಿ, ಸೂರ್ಯ ಮತ್ತು ಚಂದ್ರನು ಒಂದೇ ಸಮನಾದ ರೇಖೆಯಲ್ಲಿ ಇರುತ್ತಾರೆ. ಈ ಸಮಯದಲ್ಲಿ ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದು, ಸೂರ್ಯನ ಬೆಳಕನ್ನು ಭೂಮಿಗೆ ತಲುಪದಂತೆ ನಿರ್ಬಂಧಿಸುವ ಘಟನೆಯೇ ಸೂರ್ಯ ಗ್ರಹಣವಾಗಿದೆ.
ಈ ಸೂರ್ಯ ಗ್ರಹಣವನ್ನು ಭಾಗಶಃ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. ಚಂದ್ರನು ಸೂರ್ಯನ ಮೇಲ್ಮೈಯನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಬದಲು ಅದರ ಒಂದು ಭಾಗವನ್ನು ಮಾತ್ರ ಆವರಿಸುತ್ತಾನೆ. ಕೆಲವು ಸ್ಥಳಗಳಲ್ಲಿ, 85%ದವರೆಗೆ ಸೂರ್ಯನ ಮೇಲ್ಮೈನ ಅಸ್ಪಷ್ಟವಾಗಿರುತ್ತದೆ. ಇದು ಪೂರ್ವ ಭಾರತ, ಆಗ್ನೇಯ ಏಷ್ಯಾ, ಇಂಡೋನೇಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಕೆಲವು ಭಾಗಗಳಲ್ಲಿ ಗೋಚರವಾಗುವುದು.