ವಸಾಯಿ : ಕಳೆದ ಕೆಲವು ದಿನಗಳ ಹಿಂದೆ ಅಷ್ಟೆ ಬೀದರ್ ನಲ್ಲಿ ಮಲತಾಯಿ ಒಬ್ಬಳು ಮಗುವನ್ನು 3ನೇ ಮಹಡಿಯಿಂದ ತಳ್ಳಿ ಕೊಂಡಿದ್ದಳು. 3ನೇ ಮಹಡಿಯಿಂದ ಬಿದ್ದರು ಸ್ವಲ್ಪ ಕಾಲ ಮಗು ಬದುಕಿತ್ತು. ಬಳಿಕ ಸಾವನ್ನಪ್ಪಿತ್ತು. ಇದೀಗ 4ನೇ ಮಹಡಿಯಿಂದ ಬಿದ್ದು ಬದುಕಿದ್ದ 16 ತಿಂಗಳ ಮಗುವೊಂದು ಟ್ರಾಫಿಕ್ ಜಾಂನಲ್ಲಿ ಸಿಲುಕಿ ಮೃತಪಟ್ಟಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ 1.30ರ ವೇಳೆಗೆ ವಸಾಯಿಯ ಫಾತಿಮಾ ಮಂಜಿಲ್ ಎಂಬಲ್ಲಿ ಮಗುವೊಂದು 4ನೇ ಮ ಹಡಿಯಿಂದ ಕೆಳಗೆ ಬಿದ್ದಿದ್ದು, ಹೊಟ್ಟೆ ಮತ್ತು ಕಿಬ್ಬೊಟ್ಟೆಗೆ ತೀವ್ರವಾಗಿ ಪೆಟ್ಟಾಗಿತ್ತು. ತಕ್ಷಣ ಪೋಷಕರು ಕಂದನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಮಗುವಿಗೆ ಆಂತರಿಕ ರಕ್ತಸ್ರಾವವಾಗಿರುವುದನ್ನು ಕಂಡು, ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.
ಅದರಂತೆಯೆ ಪೋಷಕರು ಮಗುವಿನೊಂದಿಗೆ ಮುಂ ಬೈನ ಆಸ್ಪತ್ರೆಗೆ ಕಾರಿನಲ್ಲಿ ಹೊರಟಿದ್ದಾರೆ. ಆದರೆ ಅಹ್ಮದಾ ಬಾದ್-ಮುಂಬೈ ಹೆದ್ದಾರಿಯಲ್ಲಿದ್ದ ಭಾರೀ ಟ್ರಾಫಿಕ್ ಉಂಟಾಗಿ, ಅವರೆಲ್ಲ 4 ತಾಸು ಕಾರಿನಲ್ಲೇ ಕಳೆಯುವಂತಾಗಿದೆ. ಈ ವೇಳೆ ಮಗುವಿನ ಮೈ ತಣ್ಣಗಾಗಿದ್ದನ್ನು ಕಂಡ ಪೋಷಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು.