ಬೆಂಗಳೂರು : ಕೆಲಸಕ್ಕೆ ಹೋಗು ಅಂದಿದ್ದಕ್ಕೆ ತಂದೆಯನ್ನೇ ಭೀಕರವಾಗಿ ಮಗ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ಕಳೆದ ಸಪ್ಟೆಂಬರ್ ಮೂರರಂದು ನಡೆದಿದ್ದು ಇದೀಗ ಪೊಲೀಸರು ಆತ್ಮಹತ್ಯೆ ಪ್ರಕರಣವನ್ನು ಭೇದಿಸಿದ್ದಾರೆ. ತಂದೆ ಮಂಜುನನ್ನು ಹತ್ಯೆಗೈದು ನನ್ನ ತಂದೆ ಹೇಗೆ ಮಲಗಿದ್ದಾರೆ ಎಂದು ಮಗ ಮನೋಜ್ ನಾಟಕವಾಡಿದ್ದಾನೆ.
ತಂದೆಯ ಶವದ ಮುಂದೆ ಕೂತು ಕಣ್ಣೀರು ಹಾಕಿದ್ದಾನೆ. ಹತ್ಯೆಯ ಬಳಿಕ ಮನೋಜ್ ಎನ್ನುವ ಯುವಕ ಕಣ್ಣೀರು ಹಾಕಿ ನಾಟಕ ಮಾಡಿದ್ದಾನೆ. ಇನ್ನು ಕೊಲೆಯಾದ ವ್ಯಕ್ತಿಯನ್ನು ಮಂಜು ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 3ರಂದು ದಾಸರಹಳ್ಳಿಯಲ್ಲಿ ತಂದೆ ಮಂಜು ಸಾವನಪ್ಪಿದ್ದರು. ಮಗ ಮನೋಜನಿಂದ ತಂದೆ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನೋಜ್ ಪೊಲೀಸ್ರಿಗೆ ಮಾಹಿತಿ ನೀಡಿದ್ದಾನೆ. ಸೋಫಾ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಮಂಜು ಶವ ಪತ್ತೆಯಾಗಿತ್ತು. ತನಿಖೆ ವೇಳೆ ಮಂಜು ಸಾವಿನ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ.
ಮೃತ ಮಂಜು ಮನೆಗೆ ಮಗನ ಸ್ನೇಹಿತ ಬಂದು ಹೋಗಿದ್ದ ಮಗನ ಸ್ನೇಹಿತ ಪ್ರವೀಣ್ ಹಿಂದೆ ಬಿದ್ದ ಖಾಕಿ, ಸ್ನೇಹಿತ ಪ್ರವೀಣನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಈ ವೇಳೆ ಮನೋಜ್ ಹತ್ಯೆಗೈದಿರುವ ಬಗ್ಗೆ ಸ್ನೇಹಿತ ಪ್ರವೀಣ್ ಬಾಯಿಬಿಟ್ಟಿದ್ದಾನೆ. ಅವರಪ್ಪ ಪದೇ ಪದೇ ಕೆಲಸಕ್ಕೆ ಹೋಗು ಅಂತ ಹೇಳುತ್ತಿದ್ದರು. ಪದೇ ಪದೇ ಮನೋಜ್ ಕುಡಿಯುವುದಕ್ಕೆ ಹಣ ಕೇಳುತ್ತಿದ್ದರು. ಹಾಗಾಗಿ ಮನೋಜ್ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಸ್ನೇಹಿತ ಪ್ರವೀಣ್ ಬಾಯಿಬಿಟ್ಟಿದ್ದಾನೆ. ಸದ್ಯ ಪೋಲೀಸರು ಪ್ರವೀಣ್ ಅನ್ನು ಬಂಧಿಸಿದ್ದು ಮಗ ಮನೋಜ್ ಪರಾಗಿದ್ದಾನೆ. ಮನೋಜ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.