ಬೆಂಗಳೂರು : ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತದ ಬೆನ್ನಲ್ಲೇ ಕೆಎಂಎಫ್ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಹೌದು ಸೆಪ್ಟೆಂಬರ್ 22 ರಿಂದ ಹಾಲಿನ ಕೆಲವು ಉತ್ಪನ್ನಗಳ ದರ ಇಳಿಕೆ ಮಾಡಲಿದೆ. ಆದರೆ ಹಾಲು ಮತ್ತು ಮೊಸರಿನ ದರ ಯಥಾಸ್ಥಿತಿ ಮುಂದುವರೆಯಲಿದೆ.
1000 ಮಿಲಿ ಲೀಟರ್ ತುಪ್ಪ ಹಳೆಯದರ 650 ಇದ್ದರೆ, ಹೊಸದರ 610 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಇನ್ನು 500 ಮಿಲಿ ಲೀಟರ್ ಬೆಣ್ಣೆ ಹಳೆಯ ದರ 306 ಇದ್ದರೆ ಹೊಸದರ 286 ರೂಪಾಯಿ ಇದೆ. ಇನ್ನು 1000 ಗ್ರಾಮ ಪನೀರ್ ಹಳೆಯ ದರ 425 ಇದ್ದರೆ, ಹೊಸ ದರ 408 ರೂಪಾಯಿ ಇದೆ. ಒಂದು ಲೀಟರ್ ಗುಡ್ ಲೈಫ್ ಹಾಲು, ಹಳೆಯ ದರೆ ರೂ.70 ಇದ್ದರೆ, ಹೊಸದರ 68 ರೂಪಾಯಿ ಇದೆ. ಚೀಸ್ ಒಂದಕ್ಕೆ ಹಳೆಯದರ 480 ಇದ್ದರೆ ಹೊಸದರ 450 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಸಂಸ್ಕರಿಸಿದ ಚೀಸ್ ಹಳೆಯದರ 530 ಇದ್ದರೆ ಹೊಸದರ 497ಕ್ಕೆ ಇಳಿಕೆ ಮಾಡಲಾಗಿದೆ.
ಇನ್ನು ನಂದಿನಿ ಉತ್ಪನ್ನಗಳ ದರ ಇಳಿಕೆ ಮಾಡುವ ವಿಚಾರವಾಗಿ ಹಾಲು ಮೊಸರಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಹಾಲಿನ ಉತ್ಪನ್ನಗಳಿಗೆ ಮಾತ್ರ ದರ ಇಳಿಕೆ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಕೆಎಂಎಫ್ ಎಮ್.ಡಿ ಶಿವಸ್ವಾಮಿ ಹೇಳಿಕೆ ನೀಡಿದರು. ಅನ್ವಯ ಒಂದಷ್ಟು ಉತ್ಪನ್ನಗಳ ದರ ಇಳಿಸಿದ್ದೇವೆ. ಸೆಪ್ಟೆಂಬರ್ 22 ರಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಮಾರಾಟಗಾರರು ಹಾಗೂ ಗ್ರಾಹಕರು ಯಾವುದೇ ಕಾರಣಕ್ಕೂ ಗೊಂದಲವಾಗಬೇಡಿ. ಸೆಪ್ಟೆಂಬರ್ 21ರ ತನಕ ಹಳೆದರ ಮುಂದುವರೆಯುತ್ತದೆ ಎಂದು ತಿಳಿಸಿದರು.






