ಧಾರವಾಡ : ನಿನ್ನೆ ಧಾರವಾಡದಲ್ಲಿ ಗೋವಾ ಟ್ರಿಪ್ ಗೆ ತೆರಳುತ್ತಿದ್ದ ಬೈಕ್ ಸವಾರರನ್ನು ತಡೆದು ದರೋಡೆ ಮಾಡಿದ್ದ 7 ಆರೋಪಿಗಳನ್ನ ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಅಳ್ನಾವರ ರಸ್ತೆಯ ಟೋಲ್ ಬಳಿ ಈ ಒಂದು ದರೋಡೆ ಪ್ರಕರಣ ನಡೆದಿತ್ತು. ಸೆಪ್ಟೆಂಬರ್ 19 ರಂದು ಬೈಕ್ ನಲ್ಲಿ ಅಜಿತ್ ಮತ್ತು ಗೆಳೆಯರು, ಗೋವಾಕ್ಕೆ ಹೊರಟಿದ್ದರು. ಅಳ್ಳಾವರ ರಸ್ತೆಯ ಟೋಲ್ ಬಳಿ ಬೈಕ್ ತಡೆದು ದರೋಡೆ ಮಾಡಿದರು.
ಕಣ್ಣಿಗೆ ಕಾರದಪುಡಿ ಎರಚಿ ಒಂದು ಲಕ್ಷ ಹಣವನ್ನು 7 ಜನರು ದೋಚಿದ್ದಾರೆ. ಇದೀಗ ಧಾರವಾಡ ಗ್ರಾಮೀಣ ಪ್ರಾಣಿ ಪೊಲೀಸ್ರಿಂದ 7 ಜನರನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರನ್ನು ಧಾರವಾಡ ನಗರದ ಬೆಂಡಾರ ಓಣಿಯ ಮುನಾವರ್ ಹುಸೇನ್, ಜಾಫರ್ ಸೈಯದ್, ಮಹಮ್ಮದ್ ಸೈಫ್ ಶೇಕ್, ಅಕ್ಬರ್ ಬಡಗಿ, ಬಸ್ತಿ ಗಲ್ಲಿಯ ಮಹಬೂಬ್ ಮಕಾನ್ದಾರ್, ಶಿವಾನಂದ ನಗರದ ಮೊಹಮ್ಮದ್ ರಯಿಸ್ ಮುಲ್ಲಾ ಹಾಗೂ ಜಮೀರ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ ಅವರ ಬಳಿದ ಒಂದು ಲಕ್ಷ ನಗದು ಆರು ಮೊಬೈಲ್ ಹಾಗೂ ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.