ಗದಗ : ಗದಗದಲ್ಲಿ ನಿವೃತ್ತ ಶಿಕ್ಷಕರಿಂದ ಲಂಚ ಪಡೆಯುವಾಗ ಎಫ್ ಡಿ ಸಿ ಎಸ್. ಎಸ್ ಚೌತಾಯಿ ಎನ್ನುವವರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸೇವಾ ಪುಸ್ತಕ ಮಹಾಲೆಕ್ಕಪಾಲಕರ ಕಚೇರಿಗೆ ಕಳುಹಿಸಲು ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿವೃತ್ತ ಮುಖ್ಯ ಶಿಕ್ಷಕ ಎಸ್ ಬಿ ಲಕ್ಷ್ಮೇಶ್ವರ ಅವರಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಫ್ ಡಿ ಸಿ ಚೌತಾಯಿ ಅವರನ್ನ ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ಇದೀಗ ವಿಚಾರಣೆ ನಡೆಸುತ್ತಿದ್ದಾರೆ.