ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಕೃತ್ಯವೊಂದು ನಡೆಸಲಾಗಿದೆ. ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರುವಂತ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಇರುವಂತ ಕೋ ಲಿವಿಂಗ್ ಪಿಜಿಯಲ್ಲಿ ನಡೆದಿದೆ.
ಮದುವೆಯಾಗಿ ಮಗುವಿದ್ದರೂ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಇರುವಂತ ಕೋ ಲಿವಿಂಗ್ ಪಿಜಿಯಲ್ಲಿ ಟೆಕ್ಕಿ ಬಾಬು ಎನ್ನುವಾತ ಒಬ್ಬನೇ ವಾಸವಿದ್ದನು. ಎರಡು ತಿಂಗಳ ಹಿಂದೆ ಅದೇ ಪಿಜೆಗೆ ಬಂದಿದ್ದಂತ ಯುವತಿ ವಾಸವಾಗಿದ್ದಳು. ಬಾಬುಗೆ ಆಕೆ ಪರಿಚಯವಾಗಿದ್ದಳು.
ಆಕೆಯ ಪೋನ್ ನಂಬರ್ ಪಡೆದಿದ್ದಂತ ಬಾಬು, ಆಕೆಯೊಂದಿಗೆ ಮಾತನಾಡುತ್ತಿದ್ದಂತೆ. ಮೂರು ದಿನಗಳ ಹಿಂದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದಾಗ, ಯುವತಿ ಒಪ್ಪಿರಲಿಲ್ಲ. ಆಕೆಯ ಖಾಸಗಿ ಪೋಟೋ ಇಟ್ಟುಕೊಂಡು 70 ಸಾವಿರ ಹಣಕ್ಕೂ ಡಿಮ್ಯಾಂಡ್ ಮಾಡಿದ್ದನಂತೆ.
ಇದಷ್ಟೇ ಅಲ್ಲದೇ ಯುವತಿಯ ಮೊಬೈಲ್ ಪಡೆದು, ಆಕೆಯ ಖಾತೆಯಲ್ಲಿದ್ದಂತ 14 ಸಾವಿರ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಇನ್ನೂ ಹಣಕ್ಕೆ ಬೇಡಿಕೆ ಇಟ್ಟಾಗ ಸ್ನೇಹಿತರ ಬಳಿ ಸಾಲ ಪಡೆದು ನೀಡುವುದಾಗಿ ಯುವತಿ ತಿಳಿಸಿದ್ದಾರೆ. ಇದಕ್ಕೂ ಬಿಡದೇ ಗಲಾಟೆ ಮಾಡಿದ್ದಾನೆ. ಈ ವೇಳೆ ಯುವತಿಯ ಬೆನ್ನಿಗೆ ಚಾಕುವಿನಿಂದ ಟೆಕ್ಕಿ ಬಾಬು ಇರಿದು ಪರಾರಿಯಾಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಾಳು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ಸಮೀಕ್ಷೆ ಬಗ್ಗೆ ಅಂತಿಮ ತೀರ್ಮಾನ ಹಿಂದುಳಿದ ವರ್ಗದ ಆಯೋಗವೇ ಕೈಗೊಳ್ಳಲಿದೆ: ಸಿಎಂ ಸಿದ್ದರಾಮಯ್ಯ
ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ