ನಮ್ಮನ್ನು ಹೆತ್ತು, ಹೊತ್ತು, ಸಾಕಿದ ಮಾತಾಪಿತೃಗಳು, ಅವರ ಮಾತಾಪಿತೃಗಳು ಹಾಗೂ ಮತ್ತವರ ಮಾಪಿತೃಗಳು, ಪ್ರೀತಿ ತೋರಿದ ಜೊತೆಗೆ ಆಗಾಗ ದ್ವೇಷ ಕಾರಿದ ಬಂಧುಗಳು, ನೆರಳಂತೆ ಕಷ್ಟದಲ್ಲಿ ಕಾಪಾಡಿದ ಆಗಾಗ ಕಾಡಿದ ಸ್ನೇಹಿತರು, ಅಕ್ಷರ ಸಂಪತ್ತನ್ನು ಕರುಣಿಸಿ ನಮ್ಮನ್ನು ಉನ್ನತೀಕರಿಸಿದ ಗುರುಗಳಿಗೆ ಪಿಂಡಪ್ರದಾನದ ಜತೆ ತಿಲ ತರ್ಪಣ ನೀಡುವ ಸುಸಮಯ.
ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳೋಣ. ಗತಿಸಿದ ಎಲ್ಲಾ ಹಿರಿಯರು ಹಾಗೂ ಗುರುಗಳಿಗೆ ಸದ್ಗತಿ ನೀಡಲಿ ಮತ್ತು ನಮ್ಮನ್ನು ಅನುಗ್ರಹಿಸಲಿ ಎಂದು ಶ್ರೀಮಧ್ವವಲ್ಲಭ ಜನಾರ್ಧನ ರೂಪಿ ಶ್ರೀವಾಸುದೇವನನ್ನು ಬೇಡೋಣ.
ಭಾದ್ರಪದ ಮಾಸದ ಹುಣ್ಣಿಮೆಯಿಂದ 15 ದಿನಗಳ ಅವಧಿಯನ್ನು ಮಹಾಲಯ ಪಕ್ಷ ಅಥವಾ ಪಿತೃಪಕ್ಷ ಎನ್ನಲಾಗುತ್ತದೆ. ಗರುಡ ಪುರಾಣದ ಪ್ರಕಾರ ಗತಿಸಿದ ನಮ್ಮ ಹಿರಿಯರು ನಮ್ಮತ್ತ ಗಮನ ಹರಿಸುವ ಸಮಯ.
ಹಾಗಾಗಿ ಈ ಹದಿನೈದು ದಿನಗಳ ಕಾಲ ನಿತ್ಯ ಹಿರಿಯರನ್ನು ಸ್ಮರಿಸಿ ಅವರಿಗೆ ಪಿಂಡ ಪ್ರದಾನ ಮತ್ತು ತಿಲ ತರ್ಪಣ ನೀಡಬೇಕು. ಪಿಂಡ ಪ್ರಧಾನ ಸಾಧ್ಯವಾಗದವರು ತಿಲ ತರ್ಪಣ ವನ್ನು ನೀಡಬೇಕು.
ಇದು ಸಾಧ್ಯವಾಗದವರು ತಂದೆ ಗತಿಸಿ ಹೋಗಿದ್ದರೆ, ಮೃತಪಟ್ಟ ತಿಥಿಯಂದು ಮಹಾಲಯ ಪಕ್ಷ ಆಚರಿಸಬೇಕು. ಇದೆಲ್ಲಾ ಸಾಧ್ಯವೇ ಇಲ್ಲಾ ಎನ್ನುವವರು ಮಹಾಲಯ ಅಮಾವಾಸ್ಯೆ ಯಂದಾದರೂ ಪಿತೃ ಕಾರ್ಯ ನಡೆಸಬೇಕು.
ಈ ಪಕ್ಷದಲ್ಲಿ ನಿತ್ಯ ದೇವರ ಪೂಜೆಯ ಹೊರತು ಯಾವುದೇ ದೇವತಾ ಕಾರ್ಯ ಮಾಡುವುದು ಶ್ರೇಯಸ್ಕರವಲ್ಲ.
ಕಾರಣ ನಮ್ಮ ಪಿತೃಗಳೇ ದೇವತೆಗಳಾಗಿ ಬಂದು ನಾವು ಮಾಡುವ ಪಿತೃಕಾರ್ಯದಿಂದ ತೃಪ್ತರಾಗಿ ನಮ್ಮನ್ನು ಋಣಮುಕ್ತರನ್ನಾಗಿ ಮಾಡುತ್ತಾರೆ. ಹಾಗಾಗಿ ಅವರನ್ನೇ ನಾವು ಪಿಂಡ ಪ್ರದಾನ ಮತ್ತು ತಿಲತರ್ಪಣದಿಂದ ಸಂತೃಪ್ತಿಪಡಿಸಬೇಕು.
ಪಿತೃಪಕ್ಷದಲ್ಲಿ ಮಹಾಭರಣಿ, ಅವಿಧವಾ ನವಮಿ (ಗತಿಸಿದ ಮುತ್ತೈದೆಯರಿಗಾಗಿ ನಡೆಸುವ ಶ್ರಾದ್ಧ), ಯತಿ ದ್ವಾದಶಿ ಹಾಗೂ ಘಾತ ಚತುರ್ದಶಿ (ಅಪಘಾತದಿಂದ ಸತ್ತವರು, ಅಸ್ತ್ರ ಶಸ್ತ್ರಗಳಿಂದ ಮೃತಪಟ್ಟವರು) ಮತ್ತು ಮಹಾಲಯ ಅಮಾವಾಸ್ಯೆ ವಿಶೇಷ ದಿನಗಳು.
ಈ ಹದಿನೈದು ದಿನಗಳ ನಿತ್ಯ ಶ್ರಾದ್ಧ ಮಾಡುವವರು, ಮನೆಯ ಮುಂದೆ ರಂಗೋಲಿ ಹಾಕಬಾರದು. ಬಾಗಿಲಿಗೆ ಮಾವಿನ ತೋರಣ ಕಟ್ಟಿ ಹೂವು ಹಾಕಬಾರದು ಎನ್ನುತ್ತಾರೆ ಹಿರಿಯರು.
ಈ ರೀತಿ ಶುಭಕರವಾಗಿ ತಳಿರು ತೋರಣದಿಂದ ಬಾಗಿಲನ್ನು ಅಲಂಕರಿಸಿದರೆ ಸೂಕ್ಷ್ಮ ರೂಪದಲ್ಲಿನ ಗತಿಸಿದ ನಮ್ಮ ಹಿರಿಯರು ಮನೆಯೊಳಗೆ ಬರುವುದಿಲ್ಲವಂತೆ. ಕೆಲವರು ಪಿತೃಪಕ್ಷ ಶ್ರಾದ್ಧವನ್ನು ಮನೆಯಲ್ಲಿ ಮಾಡದೆ ನದೀತೀರದ ಪುಣ್ಯ ಕ್ಷೇತ್ರಗಳಲ್ಲಿ ಮಾಡುತ್ತಾರೆ. ಮನೆಯಲ್ಲಿ ಆಚರಣೆ ಮಾಡುವುದು ಇದಕ್ಕಿಂತ ಪುಣ್ಯಕರವಾದುದು. ಹಾಗಾಗಿ ಮನೆಯಲ್ಲೇ ಮಾಡಲು ಪ್ರಯತ್ನಿಸಿ. ಪಿತೃಗಳನ್ನು ಸ್ಮರಿಸಿ, ಅವರ ಋಣ ತೀರಿಸಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಗಯಾ ಗದಾಧರನು ನಮ್ಮೆಲ್ಲರ ಪಿತೃಗಳನ್ನು ತನ್ನ ಚರಣಗಳಲ್ಲಿ ಲೀನ ಮಾಡಿಕೊಂಡು, ನಮಗೆ ಪಿತೃಗಳ ಆಶೀರ್ವಾದದ ಜತೆ ತನ್ನ ಅನುಗ್ರಹವನ್ನು ಕರುಣಿಸಲೆಂದು ಬೇಡೋಣ. ಗಯಾ ಕ್ಷೇತ್ರದ ಶ್ರೀಮಹಾವಿಷ್ಣುವಿನ ಪಾದದ ಮೇಲೆ ಶ್ರಾದ್ಧ ಮಾಡಿದ ಫಲ ನಮಗೆ ಪ್ರಾಪ್ತಿಯಾಗಲಿ.