ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮದಲ್ಲಿ ಸ್ಥಳೀಯವಾಗಿ ಸಾಗರ ಡಿಪೋ ವ್ಯಾಪ್ತಿಯಿಂದ ಹೊರಡುವ ಸರ್ಕಾರಿ ಬಸ್‌ಗಳನ್ನು ನಿಲ್ಲಿಸುವಂತೆ ಕೋರಿ ಸಾಗರದ ಡಿಪೋ ಮ್ಯಾನೇಜರ್ ಗೆ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯ ಅಧ್ಯಕ್ಷ ವಸೀಮ್ ಉಳ್ಳೂರು ಅವರು ಮನವಿ ಸಲ್ಲಿಸಿದರು.
ಈ ಸಂಬಂಧ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿನ ಕೆ ಎಸ್ ಆರ್ ಟಿ ಸಿ ಡಿಪೋಗೆ ತೆರಳಿದಂತ ಅವರು, ಡಿಪೋ ಮ್ಯಾನೇಜರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು. ಸಾಗರ ಸಮೀಪದ ಉಳ್ಳೂರಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲುಗಡೆ ನೀಡುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.
ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯ ಮನವಿ ಏನು?
ಸಾಗರ ತಾಲ್ಲೂಕು ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳೂರು ಗ್ರಾಮವು ಪಂಚಾಯಿತಿಯ ಕೇಂದ್ರ ಸ್ಥಾನವಾಗಿದ್ದು ಈ ವ್ಯಾಪ್ತಿಯಲ್ಲಿ ಸುಮಾರು 700 ರಿಂದ 800 ಕುಟುಂಬಗಳು ವಾಸಿಸುತ್ತಿದ್ದು, ಸದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಾರ್ವಜನಿಕರು, ರೈತಾಪಿ ವರ್ಗದವರು, ಮಹಿಳೆಯರು ವೃದ್ಧರು ಆಸ್ಪತ್ರೆ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗೆ ಹಾಗೂ ಶಾಲಾ ಮಕ್ಕಳು ವಿದ್ಯಾಭ್ಯಾಸ ಸಲುವಾಗಿ ನಗರ ಪ್ರದೇಶಕ್ಕೆ ಸ್ಥಳೀಯವಾಗಿ ಮತ್ತು ಶಿವಮೊಗ್ಗ ಮಾರ್ಗವಾಗಿ ಚಲಿಸುವ ಸರ್ಕಾರಿ ಬಸ್ ಮುಖಾಂತರವಾಗಿಯೇ ತೆರಳುತ್ತಿದ್ದಾರೆ. ಆದರೆ ಸಾಗರದಿಂದ ಶಿವಮೊಗ್ಗ ಮತ್ತು ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಚಲಿಸುವ ಸರ್ಕಾರಿ ಬಸ್‌ಗಳು ಉಳ್ಳೂರು ಗ್ರಾಮದ ಕೆರೆಯ ಹತ್ತಿರ ಇರುವ ಬಸ್ ಸ್ಯಾಂಡ್ ನಲ್ಲಿ ಏರಿ ಹಾಗೂ ತಿರುವು ಇದೇ ಎಂಬ ಕಾರಣದಿಂದ ಸ್ಥಳೀಯ ಬಸ್ ಮತ್ತು ಮುಂಭಾಗ ಸರ್ಕಾರಿ ಬಸ್‌ಗಳು ನಿಲ್ಲಿಸದೇ, ಉಳ್ಳೂರು ಗ್ರಾಮದಿಂದ ದೂರವಿರುವ ಸಿಗಂಧೂರೇಶ್ವರಿ ಕಾಲೇಜ್ ನಿಲ್ಲಿಸುತ್ತಿರುತ್ತಾರೆ ಎಂದು ಆರೋಪಿಸಿದ್ದಾರೆ.
ಹೀಗೆ ಉಳ್ಳೂರು ಬಿಟ್ಟು, ಬೇರೆಡೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ಲಿಸುತ್ತಿರುವುದರಿಂದ ವೃದ್ದರು ಗರ್ಭಿಣಿಯರು ಹಾಗೂ ಮಹಿಳೆಯರು ಸಾರ್ವಜನಿಕರು ಸಿಗಂಧೂರೇಶ್ವರಿ ಕಾಲೇಜು ಬಳಿ ನಿಂತು ಬಸ್ ಹತ್ತುವುದು ಅಸಾಧ್ಯವಾಗಿದೆ. ಹೀಗಾಗಿ ಸರ್ಕಾರಿ ಬಸ್‌ಗಳನ್ನು ಉಳ್ಳೂರು ಗ್ರಾಮ ಬಿ.ಎಸ್.ಎನ್.ಎಲ್. ಕಛೇರಿ ಮುಂಭಾಗದಲ್ಲಿ ನಿಲ್ಲಿಸುವಂತೆ ಮನವಿ ಮಾಡಲಾಗಿದೆ. ಹೀಗೆ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ. ಈ ಹಿಂದೆ ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್‌ಗಳು ಈ ಸ್ಥಳದಲ್ಲಿ ನಿಲ್ಲಿಸುತ್ತಿದ್ದು, ಸಾರ್ವಜನಿಕರು ತೊಂದರೆ ಇಲ್ಲದೇ ನಗರ ಪ್ರದೇಶಗಳಿಗೆ ತೆರಳುತ್ತಿದ್ದರು ಎಂಬುದಾಗಿ ಮನವಿ ಪತ್ರದಲ್ಲಿ ಮನವರಿಕೆ ಮಾಡಿಕೊಡಲಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮದ ಬಿ.ಎಸ್.ಎನ್.ಎಲ್, ಕಛೇರಿ ಮುಂಭಾಗದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲುಗಡೆ ಮಾಡುವಂತೆ ಸಾಗರದ ಘಟಕ ವ್ಯವಸ್ಥಾಪಕರಿಗೆ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯ ಅಧ್ಯಕ್ಷ ವಸೀಮ್ ಉಳ್ಳೂರು ಮನವಿ ಮಾಡಿದ್ದಾರೆ.
ಈ ವೇಳೆಯಲ್ಲಿ ಶಿವಕುಮಾರ್ ಉಳ್ಳೂರು, ಇಂಮ್ತಿಯಾಜ್ ಹಾಜರಿದ್ದರು.
ಉಳ್ಳೂರು ಗ್ರಾಮ ಪಂಚಾಯ್ತಿಯಿಂದಲೂ ಈ ಹಿಂದೆ ಮನವಿ
ಅಂದಹಾಗೇ ಇಂದು ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯಿಂದ ಉಳ್ಳೂರಲ್ಲಿ ಕೆ ಎಸ್ ಆರ್ ಟಿಸಿ ಬಸ್ ನಿಲ್ಲಿಸುವಂತೆ ಮನವಿ ಮಾಡಿದ್ದರೇ, ಇದಕ್ಕೂ ಮೊದಲೇ ಕಳೆದ ಫೆಬ್ರವರಿಯಲ್ಲೇ ಉಳ್ಳೂರು ಗ್ರಾಮ ಪಂಚಾಯ್ತಿಯಿಂದಲೂ ಸಾಗರದ ಕೆ ಎಸ್ ಆರ್ ಟಿ ಸಿ ಘಟಕ ವ್ಯವಸ್ಥಾಪಕರಿಗೆ ಇದೇ ಮನವಿ ಮಾಡಲಾಗಿತ್ತು. ಆದರೇ ಈವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸವೇ ಸರಿ. ಹೀಗಾಗಿ ಕೂಡಲೇ ಈ ಬಗ್ಗೆ ಸಾಗರದ ಕೆ ಎಸ್ ಆರ್ ಟಿ ಸಿ ಘಟಕ ವ್ಯವಸ್ಥಾಪಕರು ಸಿಗಂದೂರು ಶಾಲೆಯ ಬದಲಾಗಿ ಉಳ್ಳೂರಲ್ಲಿ ಬಸ್ ನಿಲುಗಡೆ ಮಾಡುವಂತೆ ಉಳ್ಳೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜೊತೆಗೆ ಇದನ್ನು ಜರೂರಾಗಿ ಮಾಡದಿದ್ದರೇ ಕೆ ಎಸ್ ಆರ್ ಟಿ ಸಿ ಡಿಪೋ ಬಳಿಯಲ್ಲಿ ಹೋರಾಟ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: ಒಂದು ಬಾರಿಗೆ ವಯೋಮಿತಿ 2 ವರ್ಷ ಸಡಿಲಿಸಿ ರಾಜ್ಯ ಸರ್ಕಾರ ಆದೇಶ
BREAKING: ಅತ್ಯಾಚಾರ ಪ್ರಕರಣದಲ್ಲಿ ಲಲಿತ್ ಮೋದಿ ಸಹೋದರ ಸಮೀರ್ ಮೋದಿ ಅರೆಸ್ಟ್ | Samir Modi Arrest