ಬೆಂಗಳೂರು : ಧರ್ಮಸ್ಥಳದಲ್ಲಿ ಗುರುತಿಸಿದ ಸ್ಥಳ ಅಲೆಯಲು ಸೂಚನೆ ಕೋರಿ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಪುರಂದರ ಗೌಡ ಮತ್ತು ತುಕಾರಾಮ ಗೌಡ ವಿಚಾರಣೆ ನಡೆಯಿತು. ವಿಚಾರಣೆಯ ವೇಳೆ ಎಸ್ ಪಿ ಪಿ ಬಿ ಏನ್ ಜಗದೀಶ್ ವಾದ ಮಂಡಿಸಿದರು. ಯಾವ ಕಾರಣಕ್ಕೆ ಷಡ್ಯಂತರವಿದೆ ಎಂದು ಹೈಕೋರ್ಟ್ ಪ್ರಶ್ನಿಸಿತು. ಷಡ್ಯಂತ್ರ ಏಕೆ ಎಂಬುವುದರ ಬಗ್ಗೆ ಇನ್ನೂ ತಿಳಿದು ಬರಬೇಕಿದೆ. ಸ್ವತಂತ್ರವಾದ ಮಾಹಿತಿಯನ್ನೇ ನೀಡಿಲ್ಲ ಎಂದು ಜಗದೀಶ್ ಉತ್ತರಿಸಿದರು.
ನಿಮ್ಮ ಮನವಿಯೇ ಚಿನ್ನಯ್ಯನ ಹೇಳಿಕೆಯನ್ನು ಆಧರಿಸಿದೆ. ನಿಮ್ಮ ಮನವಿ ಪರಿಗಣಿಸಿದರೆ ನಾಳೆ ಮತ್ತಷ್ಟು ಜನ ಬರಬಹುದು ಎಂದು ಜಡ್ಜ್ ಇದೆ ವೇಳೆ ತಿಳಿಸಿದರು. ಚಿನ್ನಯ ಎರಡು ವರ್ಷದ ಹಿಂದೆಯೇ ಧರ್ಮಸ್ಥಳಕ್ಕೆ ಮರಳಿದ್ದ ತಲೆ ಬುರುಡೆಯನ್ನು ಬೇರೆಯವರು ತನಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ. ಚಿನ್ನಯ್ಯನ ಹೇಳಿಕೆಯನ್ನು ದಾಖಲಿಸಲು ಇಂದು ಕರೆದೊಯ್ಯಲಾಗಿದೆ. ಆದರೆ ಮ್ಯಾಜಿಸ್ಟ್ರೇಟ್ ಇಂದು ಚೆನ್ನಯ್ಯನ ಹೇಳಿಕೆ ದಾಖಲಿಸಿಲ್ಲ. ಪುರಂದರ ಮತ್ತು ತುಕಾರಾಂ ಕೂಡ ಚಿನ್ನಯ ಹೇಳಿಕೆ ಆಧರಿಸಿ ದೂರು ನೀಡಿದ್ದಾರೆ ಸ್ವತಂತ್ರವಾದ ಮಾಹಿತಿ ನೀಡಿಲ್ಲವೆಂದು ಎಸ್ಪಿಪಿ ಬಿ ಎನ್. ಜಗದೀಶ್ ವಾದ ಮಂಡಿಸಿದರು.
ಲೈಂಗಿಕ ದೌರ್ಜನಕ್ಕೆ ಒಳಗಾದ ನೂರಾರು ಶವ ಹೂತಿರುವುದಾಗಿ ದೂರಿದರು. ಚಿನ್ನಯ ನೀಡಿದ ದೂರನ್ನು ಆಧರಿಸಿ SIT ದೂರು ದಾಖಳಸಿತ್ತು.ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಬಳಿಕ 13 ಸ್ಥಳ ಗುರುತಿಸಿದ್ದರು. 13 ಸ್ಥಳದ ಪೈಕಿ ಒಂದರಲ್ಲಿ ಮಾತ್ರ ಪುರುಷನ ಶವ ಸಿಕ್ಕಿತ್ತು ಮತ್ತೊಂದು ಪುರುಷನ ಶವbಭೂಮಿಯ ಮೇಲೆ ಸಿಕ್ಕಿತ್ತು. ಮಹಿಳೆಯದೆಂದು ಚಿನ್ನಯ್ಯ ತಂದಿದ್ದ ತಲೆ ಬುರುಡೆಯು ಸಹ ಹೇಳಿದ್ದಾನೆ ಎಂದು ತನಿಖೆಯ ಬಳಿಕ ತಿಳಿದು ಬಂದಿದೆ. ಚಿನ್ನಯನ ಮೇಲೆ ವಕೀಲರ ಮೂಲಕ ನಿಗಾ ಇಡಲಾಗುತ್ತಿತ್ತು.
ಚಿನ್ನಯ 13ಸ್ಥಳ ಗುರುತಿಸಿದ್ದ ಅರ್ಜಿದಾರರು ಅದಕ್ಕಿಂತ ಹೆಚ್ಚಿನ ಸ್ಥಳ ಗುರುತಿಸುತ್ತಾರೆ ಅರ್ಜಿದಾರರ ಬಳಿ ಫೋಟೋ ಇದೆ ಎಂದು ವಕೀಲ ದೀಪಕ್ ಖೋಸ್ಲಾ ಜಡ್ಜ್ ಗೆ ತಿಳಿಸಿದರು. ಈ ವೇಳೆ ಫೋಟೋಗಳು ಇದ್ದರೆ ಅದನ್ನು ಹೈ ಕೋರ್ಟಿಗೆ ಸಲ್ಲಿಸಿ ಎಂದು ಜಡ್ಜ್ ತಿಳಿಸಿದರು. ವಕೀಲ ದೀಪಕ್ ಖೋಸ್ಲಾ ದಾಖಲೆಗಳನ್ನು ಅನುಮತಿ ಕೇಳಿದರು ಮೊದಲು ನನಗೆ ಮನವರಿಕೆ ಆದರೆ ಮಾತ್ರ ತನಿಖೆಗೆ ಆದೇಶಿಬಹುದು ಎಂದು ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿತು. ಬಳಿಕ ಜಡ್ಜ್ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದರು.
ವೈದ್ಯಕೀಯ ವಿಧ್ಯಾರ್ಥಿನಿ ಕೊಲೆಯಾಗಿದ್ದಾಳೆ ಎಂದು ಮಹಿಳೆ ದೂರಿದರು. ಆಕೆಯ ವಕೀಲರು ಕೂಡ ಶವಗಳು ಸಿಕ್ಕಿವೆ ಎಂದು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಆದರೆ ತನಿಖೆ ನಡೆಸಿದಾಗ ಆ ಮಹಿಳೆಗೆ ಮಗಳೇ ಇರಲಿಲ್ಲ ಆ ಫೋಟೋ ಕೂಡ ಬೇರೆಯವರದ್ದು ಎಂದು ತನಿಖೆಯ ಬಳಿಕ ತಿಳಿದಿದೆ. ಸುಜಾತ ಭಟ್ ದೂರು ಉಲ್ಲೇಖಿಸಿ ಬಿ.ಎನ್ ಜಗದೀಶ್ ವಾದಿಸಿದರು. ಸೆಪ್ಟೆಂಬರ್ 23 ರಂದು ಚಿನ್ನಯ್ಯನ ಹೇಳಿಕೆ ದಾಖಲಿಸಲಾಗುತ್ತದೆ. ಜಡ್ಜ್ ಚೆನ್ನಯ್ಯನ ಹೇಳಿಕೆ ದಾಖಲಿಸದಿರುವುದಕ್ಕೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿತು. ಸ್ವತಂತ್ರ ಮಾಹಿತಿ ಇದ್ದರೆ ಅರ್ಜಿದಾರರು ಹೈಕೋರ್ಟಿಗೆ ಸಲ್ಲಿಸಬೇಕು ಎಂದು ಹೇಳಿ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿತು.