ಉತ್ತರಕನ್ನಡ : ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ಘಟನೆ ಮಾಸುವ ಮುನ್ನವೇ, ಉತ್ತರ ಕನ್ನಡದಲ್ಲಿ ಮತ್ತೊಂದು ಘೋರ ಘಟನೆ ನಡೆದಿದ್ದು, ಬೈಕ್ ಓವರ್ ಟೆಕ್ ವಿಚಾರವಾಗಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವಕನಿಗೆ ಚಾಕು ಇರಿದಿದ್ದಾನೆ .
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ರಸ್ತೆಯ ಮಾವಿಹೊಳೆ ಎಂಬಲ್ಲಿ ಈ ಒಂದು ಘಟನೆ ನಡೆದಿದೆ. ವಿವೇಕ್ ನಾಯಕಗೆ ಅದ್ನಾನ್ ನದೀಮ್ ಶೇಕ್ ಎನ್ನುವ ಮುಸ್ಲಿಂ ಯುವಕ ಚಾಕು ಇರಿದಿದ್ದಾನೆ. ಗಾಯಗೊಂಡ ವಿವೇಕ್ ಸುರೇಶ್ ನಾಯಕ್ ಸದ್ಯ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಕುರಿತಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.