ಬೆಂಗಳೂರು : ರಾಜ್ಯದಲ್ಲಿ ಸೆಪ್ಟೆಂಬರ್ 22ರಂದು ಜಾತಿಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಈಗಾಗಲೇ ಈ ಕುರಿತು ಆದೇಶ ಹೊರಡಿಸಿದೆ. ಇದರ ಮಧ್ಯ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಕುರಿತು ಕೆಲವು ಸಚಿವರಿಂದ ಪರ ವಿರೋಧ ಚರ್ಚೆಯಾಗುತ್ತಿರುವ ಬೆನ್ನಲ್ಲೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಜಾತಿಗತಿ ಸಮೀಕ್ಷೆ ಕುರಿತು ಬಿಡುಗಡೆ ಮಾಡಿರುವ ಕೈಪಿಡಿ ಮೂಲೆಗುಂಪಾಗಿದೆ.
ಹೌದು ಹಿಂದುಳಿದ ವರ್ಗದ ಆಯೋಗದ ಮಹಾ ಎಡವಟ್ಟಿನಿಂದ ಜಾತಿ ಸಮೀಕ್ಷೆ ತಯಾರಿ ಎಡವಟ್ಟಿನ ಹಿನ್ನೆಲೆಯಲ್ಲಿ 2 ಲಕ್ಷ ಹೊಸ ಜಾತಿಗತಿ ಕೈಪಿಡಿ ಇದೀಗ ತಿಪ್ಪೆಗೆ ಸೇರಿದೆ. ಮೊನ್ನೆ ಮೊನ್ನೆ ಅಷ್ಟೇ ಸಿಎಂ ಸಿದ್ದರಾಮಯ್ಯ ಕೈಪಿಡಿ ಬಿಡುಗಡೆ ಮಾಡಿರುವ ಕೈಪಿಡಿ ಮೂಲೆಗುಂಪಾಗಿದೆ. ಹಿಂದುಳಿದ ಆಯೋಗದ ಮಹಾ ಎಡವಟ್ಟಿನಿಂದ ಇದೀಗ ಸಿಎಂ ಸಿದ್ದರಾಮಯ್ಯ ಅವರೇ ಬಿಡುಗಡೆಗೊಳಿಸಿರುವ ಕೈಪಿಡಿ ಮೂಲೆಗುಂಪಾಗಿದೆ.
ಸುಮಾರು 1 ಕೋಟಿ ಖರ್ಚಿನಲ್ಲಿ ಈ ಒಂದು ಕೈಪಿಡಿ ತಯಾರಿಸಲಾಗಿತ್ತು. ಈಗ ಮತ್ತೆ ಹೊಸ ಕೈಪಡಿ ತಯಾರಿಕೆಗೆ ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ. ಸೆಪ್ಟೆಂಬರ್ 22 ರಿಂದ ಆರಂಭ ಹಿನ್ನೆಲೆಯಲ್ಲಿ ಎಲ್ಲಾ ಶಿಕ್ಷಕರಿಗೆ ಕೈಪಿಡಿ ವಿತರಣೆಯಾಗುವ ಬಗ್ಗೆ ಇದೀಗ ಅನುಮಾನ ವ್ಯಕ್ತವಾಗುತ್ತಿದೆ ಸರ್ವೆ ಕಾರ್ಯ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.







