ಬೆಂಗಳೂರು : ರಾಜ್ಯ ಸರ್ಕಾರ ಸೆಪ್ಟೆಂಬರ್ 22ರಂದು ರಾಜ್ಯದಲ್ಲಿ ಜಾತಿಗಣಿತಿ ನಡೆಸಲು ದಿನಾಂಕ ಫಿಕ್ಸ್ ಮಾಡಿದೆ. ಆದರೆ ಜಾತಿ ಗಣತಿಗೆ ಪರ ಮತ್ತು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಜಾತಿ ಗಣತಿ ಸಮೀಕ್ಷೆ ಕುರಿತಂತೆ ಇಂದು ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆಯಲ್ಲಿ ಸುಧೀರ್ಘವಾದ ಚರ್ಚೆ ನಡೆಯಿತು.
ಈ ವೇಳೆ ಈ ಒಂದು ಜಾತಿ ಗಣತಿ ಸಮೀಕ್ಷೆ ಮುಂದೊಡುವಂತೆ ಸಚಿವರು ಆಗ್ರಹಿಸಿದರು. ಇದೆ ವೇಳೆ ಸಿಎಂ ಸಿದ್ದರಾಮಯ್ಯ ನನ್ನನ್ನು ಮೇಲ್ವರ್ಗದ ವಿರೋಧಿ ಎಂದು ಆರೋಪಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ದಿನೇ ದಿನೇ ಜಾತಿವಾರು ಗೊಂದಲ ಸೃಷ್ಟಿಯಾಗುತ್ತಿದೆ .ಸಮೀಕ್ಷೆಯ ಸಾಧಕ ಭಾದಕಗಳ ಬಗ್ಗೆ ಸಚಿವರು ಪ್ರಸ್ತಾಪಿಸಿದರು. ಈಗಾಗಲೇ ಜಾತಿ ಗಣತಿ ಸಮೀಕ್ಷೆ ಘೋಷಿಸಿದ್ದೇವೆ ಈಗ ಏನು ಮಾಡಬೇಕು ಎಂಬುದರ ಸಮಾಲೋಚನೆ ನಡೆಯಿತು.
ಇದೆ ವೇಳೆ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದು ತಮ್ಮ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ. ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಪರ ಅಂತ ಹೇಳುತ್ತಾರೆ. ಮೇಲ್ವರ್ಗದ ವಿರೋಧಿ ಎಂಬಂತೆ ನನ್ನನ್ನು ಬಿಂಬಿಸಲಾಗುತ್ತಿದೆ. ಜಾತಿಗಂಡತಿ ಸರ್ವೆ ಆರ್ಥಿಕ ಪರಿಸ್ಥಿತಿ ಎಂದು ಅರಿಯಲು ಜನರಿಗೆ ಹೇಗೆ ಮನವರಿಕೆ ಮಾಡುತ್ತೀರಿ? ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.