ಬೆಂಗಳೂರು : ಆಳಂದ್ ಕ್ಷೇತ್ರದಲ್ಲಿ ಮತದಾರರ ಹೆಸರು ಡಿಲೀಟ್ ಗೆ ಯತ್ನ ಆರೋಪದ ಕುರಿತು ವಿಪಕ್ಷ ನಾಯಕ ಆರ್ ಅಶೋಕ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ರಾಹುಲ್ ಗಾಂಧಿ ಕಾಮನ್ ಸೆನ್ಸ್ ಇಲ್ಲದ ವ್ಯಕ್ತಿ ಎಂದು ಕಿಡಿ ಕಾರಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಯಾರೋ ಬರೆದು ಕೊಟ್ಟಿದ್ದನ್ನು ಹೇಳಿ ಅಪಹಾಸಕ್ಕೆ ಈಡಾಗಿದ್ದಾರೆ. ಮಹದೇವಪುರ ಬಗ್ಗೆ ಮಾತನಾಡಿದ ಆರೋಪ ಬೋಗಸ್ ಅಂತ ಆಯ್ತು. ಈಗ ಆಳಂದ್ ಕ್ಷೇತ್ರವನ್ನು ಹಿಡಿದುಕೊಂಡಿದ್ದಾರೆ. ಕೋರ್ಟ್ ಹೇಳಿದರು ಕೋಲಾರ ಜಿಲ್ಲಾಧಿಕಾರಿ ಸಿಸಿಟಿವಿ ವಿಡಿಯೋ ಕೊಟ್ಟಿಲ್ಲ. ರಾಹುಲ್ ಗಾಂಧಿ ಯಾಕೆ ಮಾಲೂರು ಕ್ಷೇತ್ರದ ಬಗ್ಗೆ ಮಾತನಾಡುತ್ತಿಲ್ಲ? ರಾಹುಲ್ ಗಾಂಧಿ ಇದುವರೆಗೂ ಸಿಡಿಸಿದ ಎಲ್ಲವೂ ಠುಸ್ ಪಟಾಕಿ ಪಟಾಕಿ.
ಆಯೋಗ ಆರೋಪ ನಿರಾಕರಿಸಿದರು ಕೂಡ ಕಾಂಗ್ರೆಸ್ಸಿಗರಿಗೆ ನೆಮ್ಮದಿ ಇಲ್ಲ. ಸಂಸತ್ ನಲ್ಲಿ ದಾಖಲೆಗಳನ್ನು ಕೊಟ್ಟು ಯಾಕೆ ಚರ್ಚೆ ಮಾಡಲಿಲ್ಲ? ಎಲ್ಲಿ ದಾಖಲೆ ಕೇಳುತ್ತಾರೋ ಅಲ್ಲಿ ಮಾತನಾಡುವುದೇ ಇಲ್ಲ. ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಚುನಾವಣಾ ಆಯೋಗ ಉತ್ತರ ಕೊಟ್ಟಿದೆ. ಈ ವಿಚಾರಕ್ಕೆ ಪ್ರಧಾನಿ ಮೋದಿ ಅಮಿತ್ ಶಾ ಯಾಕೆ ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದರು.