ಬೆಂಗಳೂರು : ಬೆಂಗಳೂರಿನ ರಿಂಗ್ ರಸ್ತೆಯಲ್ಲಿ ಟ್ರಾಫಿಕ್ ಕಂಟ್ರೋಲ್ ಗಾಗಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ಬೆಂಗಳೂರಿನ ಎಚ್ಎಎಲ್ ಠಾಣಾ ವ್ಯಾಪ್ತಿಯ ರಿಂಗ ರಸ್ತೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಸೆಪ್ಟೆಂಬರ್ 19 ರಿಂದ 26ರವರೆಗೆ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ ಲೇ ಅರೇಬಿಯಾ, ಬಿರಿಯಾನಿ ಜೋನ್ ಕ್ರೋಮ್ ಜಂಕ್ಷನ್ ನಿಂದ ಮಾರತಹಳ್ಳಿ, ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆ ಅವರಿಗೆ ಸಂಚಾರ ನಿರ್ಬಂಧಿಸಲಾಗಿದೆ.
ರಿಂಗ್ ರೋಡ್ ನಲ್ಲಿ ಎಲ್ಲ ಮಾದರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಹದೇವಪುರ, ಕಾರ್ತಿಕ ನಗರ ಕಡೆಯಿಂದ ವಾಹನ ಪ್ರವೇಶ ಸಹ ನಿರ್ಬಂಧಿಸಲಾಗಿದೆ. ಕಾಡುಬಿಸನಹಳ್ಳಿ ಸರ್ವಿಸ್ ರಸ್ತೆಗೆ ವಾಹನಗಳ ಪ್ರವೇಶ ನಿರ್ಭಂಧಿಸಿದ ಸಂಚಾರಿ ಪೊಲೀಸರು. ಕಲಾಮಂದಿರದ ಬಳಿ ಸರ್ವಿಸ್ ರಸ್ತೆಗೆ ತೆರಳಿ ಮಾರತಹಳ್ಳಿ ಬಳಿ ಯೂಟರ್ನ ತೆಗೆದುಕೊಂಡು ಮಾರತಹಳ್ಳಿಯ ಅಂಡರ್ ಪಾಸ್ ಬಳಿ ಯೂಟರ್ನ್ ತೆಗೆದುಕೊಂಡು ಮಾರಾತಹಳ್ಳಿ ಸೇತುವೆ ಬಳಿ ಎಡಕ್ಕೆ ತಿರುಗಿ ಮುನೇನಕೊಳಲು, ಕಾಡು ಬೀಸನಹಳ್ಳಿ ಜಂಕ್ಷನ್, ಪಣತ್ತೂರು, ಕರಿಯಮ್ಮನ ಅಗ್ರಹಾರಕ್ಕೆ ಪ್ರಯಾಣ ಬೆಳೆಸಬಹುದು.