ಕೋಲಾರ : ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ನಿನ್ನೆ ಆದೇಶ ಹೊರಡಸಿತ್ತು.ಬಳಿಕ ನಂಜೇಗೌಡ ಪರ ವಕೀಲರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಬೆಂಜ್ ಎಂದು ಹೇಳಿ ಮನವಿ ಮಾಡಿದರು. ಬಳಿಕ ಹೈಕೋರ್ಟ್ 30 ದಿನಗಳ ಕಾಲ ಅವಕಾಶ ನೀಡಿ ತನ್ನದೇ ತೀರ್ಪಿಗೆ ತಡೆ ನೀಡಿತು.
ಇದೀಗ ಈ ವಿಚಾರವಾಗಿ ಮರು ಮತಎಣಿಕೆಗೆ ಕೋರ್ಟ್ ಆದೇಶ ನೀಡಿದ್ದು, ಸದ್ಯ ಮಾಲೂರು ಶಾಸಕ ಕೆವೈ ನಂಜೇಗೌಡ ಶಾಸಕಸ್ಥಾನವನ್ನು ಅಸಿಂಧುಗೊಳಿಸಲಾಗಿದೆ. ಹೀಗಾಗಿ ಒಂದು ವೇಳೆ ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ದರೆ ತಾವು ರಾಜಕೀಯ ಬಿಡುವುದಾಗಿ ಮಾಲೂರು ಶಾಸಕ ಕೆವೈ ನಂಜೇಗೌಡ ಸವಾಲು ಹಾಕಿದ್ದಾರೆ.
ನಮ್ಮ ಕ್ಷೇತ್ರದ ಮರು ಮತಎಣಿಕೆಗೆ ಹೈಕೋರ್ಟ್ ತೀರ್ಪು ನೀಡಿದೆ. ನನ್ನ ವಿರುದ್ಧ ಚುನಾವಣೆ ಸೋತ ಅಭ್ಯರ್ಥಿ ಮರು ಎಣಿಕೆಗೆ ನ್ಯಾಯಾಲಯದ ಮೊರೆ ಹೋಗಿದ್ದರು.ಹೀಗಾಗಿ ರೀ ಕೌಂಟಿಂಗ್ ಕೊಟ್ರೆ ನಾನು ಬದ್ಧ.ಆದ್ರೆ ಈಗ ಶಾಸಕ ಸ್ಥಾನವನ್ನೇ ಅಸಿಂಧುಗೊಳಿಸಲಾಗಿದೆ.
ಹೈಕೋರ್ಟ್ ತೀರ್ಪು ಅಸಮಾಧಾನ ತಂದಿದ್ದು, ಇದರ ವಿರುದ್ಧ ನಾನು ಸುಪ್ರೀಂ ಕೋರ್ಟ್‌ಗೆ ಅಪೀಲು ಹಾಕಿದ್ದೇನೆ ಎಂದಿದ್ದಾರೆ. ಹೈಕೋರ್ಟ್ ಆದೇಶದಂತೆ ಮರು ಎಣಿಕೆಯಲ್ಲಿ ನಡೆಯಲಿ. ಒಂದುವೇಳೆ ಮಂಜುನಾಥ್ ಗೌಡ ಗೆದ್ದರೆ ನಾನು ರಾಜಕೀಯ ಬಿಡುತ್ತೇನೆ. ಆದ್ರೆ ಹೈಕೋರ್ಟ್ ನ ಅಸಿಂಧು ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.