ಬೆಂಗಳೂರು : ಚಾಮುಂಡಿ ತಾಯಿಗೆ ಹೂ ಮೂಡಿಸುವ ವಿಚಾರವಾಗಿ ವಿಜಯಪುರ ನಗರ ಉಚ್ಛಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾಮಾನ್ಯ ದಲಿತ ಮಹಿಳೆಗೂ ಇದಕ್ಕೆ ಅವಕಾಶ ಇಲ್ಲ. ಕೇವಲ ಸನಾತನ ಧರ್ಮದವರಿಗೆ ಮಾತ್ರ ಚಾಮುಂಡಿ ತಾಯಿಗೆ ಹೂ ಮುಡಿಸುವ ಅವಕಾಶ ಇದೆ ಎಂದು ಹೇಳಿಕೆ ನೀಡಿದ್ದರು.
ಇವರ ಈ ಒಂದು ಹೇಳಿಕೆಯಿಂದ ಕೊಪ್ಪಳ ನಗರದಲ್ಲಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ಕಾರ್ಯಕರ್ತ ಮಲ್ಲು ಪೂಜಾರ್ ಎಂಬಾತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿತ್ತು ಈ ಒಂದು ಎಫ್ಐಆರ್ ಪ್ರಶ್ನಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆಯ ನಡೆಸಿದ ಹೈಕೋರ್ಟ್ ಯತ್ನಾಳ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿತು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ FIR ಹಿನ್ನೆಲೆಯಲ್ಲಿ ಅಟ್ರಾಸಿಟಿ ಕಾಯ್ದೆ ಯಡಿ ಅರ್ಜಿ ಸಲ್ಲಿಸಿದ್ದಾರೆ. ಸನಾತನ ಧರ್ಮದ ಹೆಣ್ಣು ಮಕ್ಕಳಿಗೆ ಚಾಮುಂಡಿ ತಾಯಿಗೆ ಪೂಜೆ ಮಾಡುವ ಹಕ್ಕಿದೆ ದಲಿತ ಹೆಣ್ಣು ಮಕ್ಕಳಿರಲಿ ಯಾವುದೇ ಸಮಾಜವರಲ್ಲಿ ಹಕ್ಕಿದೆ ಎಂದಿದ್ದಾರೆ. ಆದರೆ ಹೇಳಿಕೆಯನ್ನು ತಿರುಚಿಸಲಾಗಿದೆ ಎಂದು ಶಾಸಕ ಯತ್ನಾಳ್ ಪರ ವಕೀಲ ವೆಂಕಟೇಶ ದಳವಾಯಿ ವಾದ ಮಂಡಿಸಿದರು.
ಅಂದು ಹೇಳಿರುವ ಹೇಳಿಕೆಯನ್ನು ಯತ್ನಾಳ ಪರ ವಕೀಲರು ಮೊಬೈಲ್ ನಲ್ಲಿ ಕೇಳಿಸಿದರು. ಈ ವೇಳೆ ಹೈಕೋರ್ಟ್ ಶಾಸಕ ಯತ್ನಾಳ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿತು. ಅಲ್ಲದೆ ಪೊಲೀಸರ ತನಿಖೆಗೆ ಸಹಕರಿಸಲು ಶಾಸಕ ಯತ್ನಾಳ್ಗೆ ಹೈಕೋರ್ಟ್ ಸೂಚನೆ ನೀಡಿತು. ಯಾವುದೇ ಪಕ್ಷದವರು ಇರಲಿ ಒಂದು ಸಮುದಾಯ ಓಲೈಸಿದರೆ ಹೀಗಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.